'ಮ್ಯಾಂಡಸ್' ಮಾರುತ ಎಫೆಕ್ಟ್; ಕರಾವಳಿಯಲ್ಲೂ ವರ್ಷಧಾರೆ
Sunday, December 11, 2022
ಮಂಗಳೂರು: ತಮಿಳುನಾಡಿನಲ್ಲಿ ಅಬ್ಬರಿಸಿ ತಗ್ಗಿದ ಮ್ಯಾಂಡಸ್ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿಗೂ ತಟ್ಟಿದೆ. ಶನಿವಾರ ರಾತ್ರಿಯಿಂದ ಆರಂಭವಾದ ಮಳೆ ಭಾನುವಾರ ಬೆಳಿಗ್ಗೆಯೂ ಮುಂದುವರಿದಿದೆ. ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ.
ಕಳೆದ ಎರಡು ದಿನಗಳಿಂದ ಆಗಾಗ್ಗೆ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಶನಿವಾರ ದೊಪ್ಪನೆ ಮಳೆ ಸುರಿದಿದೆ. ವಾರಾಂತ್ಯ ಆಗಿರೋದರಿಂದ ಹಲವು ಕಾರ್ಯಕ್ರಮಗಳಿಗೂ ಮಳೆರಾಯ ಅಡ್ಡಿಯಾದನು.
ಭಾನುವಾರವೂ ಮಳೆ ಮುಂದುವರೆದಿದ್ದು, ಒಂದು ಕಡೆ ಚಳಿಯ ವಾತಾವರಣವೂ ಜೋರಾಗಿದೆ. ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.