-->
MANGALORE: ಮಧ್ಯರಾತ್ರಿ ಬಜರಂಗದಳ ಕಾರ್ಯಕರ್ತರಿಂದ ಹಿಂದೂ ಮುಸ್ಲಿಂ ಜೋಡಿ ಮೇಲೆ ಹಲ್ಲೆ!?

MANGALORE: ಮಧ್ಯರಾತ್ರಿ ಬಜರಂಗದಳ ಕಾರ್ಯಕರ್ತರಿಂದ ಹಿಂದೂ ಮುಸ್ಲಿಂ ಜೋಡಿ ಮೇಲೆ ಹಲ್ಲೆ!?



ಮಂಗಳೂರು: ಮಧ್ಯರಾತ್ರಿ 12ರ ಬಳಿಕ ತಿರುಗಾಡುತ್ತಿದ್ದ ಹಿಂದೂ ಮುಸ್ಲಿಂ ಜೋಡಿಯನ್ನ ಬಜರಂಗದಳ ಕಾರ್ಯಕರ್ತರು ತಡೆದು ಹಲ್ಲೆ ಮಾಡಿರುವಂತ ಘಟನೆ ಮಂಗಳೂರಿನ ಕೊಟ್ಟಾರ ಸಮೀಪ ನಡೆದಿದೆ. 



ಮುಸ್ಲಿಂ ಯುವಕರ ಜೊತೆ ಇದ್ದ ಇಬ್ಬರು ಹಿಂದೂ ಯುವತಿಯರನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ಬಜರಂಗದಳ ಕಾರ್ಯಕರ್ತರು ಪೊಲೀಸರನ್ನ ಕರೆದು ಪ್ರಶ್ನಿಸುವಂತೆ ತಿಳಿಸಿದ್ದಾರೆ. ಈ ವೇಳೆ ಹಿಂದೂ ಮುಸ್ಲಿಂ ಜೋಡಿ ನಾವು ಹೋಟೆಲ್ ಗೆ ಊಟಕ್ಕೆಂದು ಬಂದಿದ್ದೇವೆ ಎಂದು ತಡಕಾಡುತ್ತ ಉತ್ತರಿಸಿದ್ದಾರೆ. ಇದನ್ನ ಒಪ್ಪದ ಬಜರಂಗದಳ ಕಾರ್ಯಕರ್ತರು, ಅಷ್ಟಕ್ಕೂ ಇಷ್ಟು ತಡರಾತ್ರಿಗೆ ಯಾವ ಹೋಟೆಲ್ ಓಪನ್ ಇದೆ ಎಂದು ತೋರಿಸಿ ಎಂದು ಆ ಯುವಕ ಯುವತಿಯರಲ್ಲಿ ವಿಚಾರಿಸಿದ್ದಾರೆ. ಇದಕ್ಕೆ ಮರು ಉತ್ತರ ನೀಡದೆ ಪೇಚಾಡಿದ್ದಾರೆ. ಒಂದು ವೇಳೆ 12ರ ಬಳಿಕ ಅಂತ ಯಾವೂದಾದ್ರೂ ಹೋಟೆಲ್ ಕೊಟ್ಟಾರದಲ್ಲಿ ಕಾರ್ಯಚರಿಸುತ್ತಿದ್ದರೆ ಪೊಲೀಸರು ಇದರ ಬಗ್ಗೆ ಕೂಡಲೇ ಗಮನಿಸಬೇಕು ಎಂದು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದರು. 




ಪದೇ ಪದೇ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕಂಡುಬರುತ್ತಿದ್ದರೂ, ಪೊಲೀಸ್ ಇಲಾಖೆ ಇನ್ನೂ ಮೌನವಹಿಸಿರುವುದು ಯಾಕೇ ಎಂಬುದು ಪ್ರಶ್ನೆ. ಜೊತೆಗೆ ಲವ್ ಜಿಹಾದ್ ಅಂತ ಪ್ರಕರಣಗಳ ಬಗ್ಗೆ ಸೂಕ್ಷö್ಮವಾಗಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಒಂದು ವೇಳೆ ಇಂತಹ ಪ್ರಕರಣಗಳ ಮೇಲೆ ನಿಗಾ ಇಟ್ಟಲ್ಲಿ ಬಜರಂಗದಳ ಕಾರ್ಯಕರ್ತರ ದಾಳಿಗೂ ಬ್ರೇಕ್ ಹಾಕಬಹುದು.  ಹಾಗಾಂತ ಬಜರಂಗದಳ ಕಾರ್ಯಕರ್ತರು ಕೂಡ ಜೋಡಿಗಳ ಮೇಲೆ ಹಲ್ಲೆ ಮಾಡುವುದು ಕೂಡ ಎಷ್ಟು ಸರಿ ಎಂಬುದು ಕೂಡ ಪ್ರಶ್ನೆಯಾಗಿದೆ. ಹಾಗಾಗಿ ಈ ಕೂಡಲೇ ಪೊಲೀಸರು ಮಧ್ಯರಾತ್ರಿ ಬಳಿಕ ಕಾರ್ಯಚರಿಸುತ್ತಿರುವ ಹೋಟೆಲ್ ಮೇಲೂ ನಿಗಾ ಇಡಬೇಕಿದೆ. ಜೊತೆಗೆ ಲವ್ ಜಿಹಾದ್ ನಂತಹ ಪ್ರಕರಣಗಳು ಕಂಡು ಬಂದಲ್ಲಿ ಬೇಧಿಸಬೇಕಿದೆ. 

Ads on article

Advertise in articles 1

advertising articles 2

Advertise under the article