-->
MANGALORE: ಕಾಂತಾರ-2 ಚಿತ್ರಕ್ಕೆ ಗ್ರೀನ್ ಸಿಗ್ನಲ್; ಶುದ್ಧಾಚಾರ ಮುಖ್ಯವೆಂದ ಅಣ್ಣಪ್ಪ ಪಂಜುರ್ಲಿ

MANGALORE: ಕಾಂತಾರ-2 ಚಿತ್ರಕ್ಕೆ ಗ್ರೀನ್ ಸಿಗ್ನಲ್; ಶುದ್ಧಾಚಾರ ಮುಖ್ಯವೆಂದ ಅಣ್ಣಪ್ಪ ಪಂಜುರ್ಲಿ



ಮಂಗಳೂರು: ವಿಶ್ವಾದ್ಯಂತ ಭಾರಿ ಸದ್ದು ಮಾಡಿದ್ದ ಕಾಂತಾರ ಸಿನಿಮಾದ ಎರಡನೇ ಭಾಗ ತೆರೆ ಕಾಣಲಿದೆಯಾ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ಚಿತ್ರತಂಡ ದೈವದ ಅನುಮತಿ ಕೋರಿದ್ದು, ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಕಾಂತಾರ-2 ಜನರ ಮುಂದೆ ಬರುವುದು ಪಕ್ಕಾ ಆಗಿದೆ.

ಕಾಂತಾರ ಭಾಗ-2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ಬಳಿ ಕಾಂತಾರ ಚಿತ್ರ ತಂಡ ಅನುಮತಿ ಕೇಳಿದೆ. ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ರಿಷಭ್​ ಶೆಟ್ಟಿ ಸೇರಿ ಇಡೀ ಚಿತ್ರ ತಂಡ ಅನುಮತಿ ಕೇಳಿದ್ದಾರೆ.ಈ ಸಂರ‍್ಭ ಅಣ್ಣಪ್ಪ ಪಂಜುರ್ಲಿ ದೈವ ಕಾಂತಾರ ಚಿತ್ರಕ್ಕೆ ಅನುಮತಿಯನ್ನೂ ನೀಡಿದೆ. ಆದರೆ ಚಿತ್ರ ಮಾಡಲು ಶರತ್ತು ಒಂದನ್ನು ಹಾಕಲಾಗಿದೆ.

ಮಂಗಳೂರಿನ ಬಂದಲೆಯಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಕಾಂತಾರ ಚಿತ್ರ ತಂಡ ಹರಕೆ ಕೋಲ ನೀಡಿದೆ. ಈ ವೇಳೆ ಕಾಂತಾರ-2 ಚಿತ್ರಕ್ಕೆ ಅನುಮತಿ ಚಿತ್ರತಂಡ ಅನುಮತಿಯನ್ನೂ ಕೇಳಿದೆ. ಈ ವೇಳೆ ಅಣ್ಣಪ್ಪ ಪಂಜುರ್ಲಿ ದೈವ ಚಿತ್ರತಂಡಕ್ಕೆ ಹಲವು ನಿಯಮಗಳನ್ನು ಹೇಳಿದೆ.

'ಮೊದಲು ಚಿತ್ರಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ. ಈ ಬಾರಿ ನೂರು ಬಾರಿ ಯೋಚನೆ ಮಾಡಿ ಚಿತ್ರ ಮಾಡಬೇಕು. ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ. ಶುದ್ಧಾಚಾರದೊಂದಿಗೆ ಚಿತ್ರವನ್ನು ಮುಂದುವರಿಸಿರಿ. ಮಾಡಿದ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡುತ್ತೇನೆ' ಎಂದು ಕಾಂತಾರ ಚಿತ್ರತಂಡಕ್ಕೆ ಅಣ್ಣಪ್ಪ ಪಂಜುರ್ಲಿ ದೈವ ಅಭಯ ನೀಡಿದೆ.

ಅಣ್ಣಪ್ಪ ಪಂಜುರ್ಲಿ ಕೋಲದ ಸಂರ‍್ಭದಲ್ಲಿ ನರ‍್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಕಾಂತಾರಾ ಕಲಾವಿದರು,ರಿಷಬ್ ಕುಟುಂಬಸ್ಥರು ಭಾಗಿ ಆಗಿದ್ದಾರೆ.

Ads on article

Advertise in articles 1

advertising articles 2

Advertise under the article