ಕೆಲಸದಾಳು ವಿರುದ್ಧ ಗಲ್ಫ್ ನಲ್ಲಿ ಬೆಳ್ತಂಗಡಿ ಸಹೋದರರ ದರ್ಪ; ಕರಾವಳಿಯಲ್ಲಿ ವ್ಯಾಪಕ ಆಕ್ರೋಶ!
ಮಂಗಳೂರು: ಗಲ್ಫ್ ರಾಷ್ಟ್ರದಲ್ಲಿರುವ ಸಹೋದರರಿಬ್ಬರು ಮ್ಯಾನ್ ಪವರ್ ಹೆಸರಿನಡಿ ಕೆಲಸಕ್ಕೆ ಯುವಕರನ್ನು ಸೇರಿಸಿಕೊಳ್ಳುತ್ತಿದ್ದು, ತಮ್ಮ ಮಾತಿಗೆ ತಕ್ಕಂತೆ ನಡೆಯದೇ ಹೋದರೆ ಅಂತಹವರನ್ನು ಕೆಟ್ಟದಾಗಿ ಬೈಯ್ಯುವ ಮತ್ತು ಕಂಪೆನಿಯಿಂದ ಟರ್ಮಿನೇಟ್ ಮಾಡುವ ಮೂಲಕ ಹಿಂಸಿಸುತ್ತಿರುವ ಘಟನೆಯೊಂದರ ಸಂಬಂಧ ಆಡಿಯೋ ವೈರಲ್ ಮೂಲಕ ಗೊತ್ತಾಗಿದೆ.
ಸದ್ಯ ಕರಾವಳಿಯಲ್ಲಿ ಬೆಳ್ತಂಗಡಿಯ ಇಬ್ಬರು ಸಹೋದರರು ನಡೆಸುತ್ತಿದ್ದಾರೆ ಎನ್ನಲಾದ ಮ್ಯಾನ್ ಪವರ್ ಕಂಪೆನಿಯಲ್ಲಿ ಯುವಕನೋರ್ವ ಮನೆಯವರಿಗೂ ಸೇರಿದಂತೆ ಕೆಟ್ಟದಾಗಿ ಬೈದಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಕೆಲಸಕ್ಕೆ ಸೇರಿದ ರಾಹಿಫ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, "ನೀನೋರ್ವ ಬಿಕಾರಿ, ಕಾಲಿನ ಅಡಿಯಲ್ಲಿ ಇರಬೇಕಾದವನು" ಎಂದೆಲ್ಲ ದರ್ಪ ಪ್ರದರ್ಶಿಸಿರುವುದು ಗೊತ್ತಾಗಿದೆ. ಸಂತ್ರಸ್ತ ತನ್ನ ತಂದೆ, ತಾಯಿಗೆ ಬೈಯ್ಯದಂತೆ ಬೇಡಿಕೊಂಡರೂ ಕೆಟ್ಟ ಭಾಷೆಯಲ್ಲಿ ಬೆಳ್ತಂಗಡಿ ಮೂಲದವರು ಎನ್ನಲಾದ ಆ ಇಬ್ಬರು ಸಹೋದರರು ಮಾತನಾಡಿದ್ದಾರೆ. ಸದ್ಯ ಮ್ಯಾನ್ ಪವರ್ ನಡೆಸುತ್ತಿರುವ ಈ ಇಬ್ಬರು, ರಾಹಿಫ್ ಅನ್ನೋ ಯುವಕನ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದು ಕರಾವಳಿಯಾದ್ಯಂತ ವೈರಲ್ ಆಗಿದ್ದು, ಇತ್ತ ಇದರ ವಿರುದ್ಧ ಹಲವು ಮುಸ್ಲಿಂ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹವರಿಂದ ಸಹಾಯ ಪಡೆಯದಿರಿ
ಮ್ಯಾನ್ ಪವರ್ ಹೆಸರಿನಲ್ಲಿ ಯುವಕರನ್ನು ಜೀತದಾಳುವಾಗಿ ದುಡಿಸುವವರಿಂದ ಯಾವುದೇ ವ್ಯಕ್ತಿ, ಮಸೀದಿ ಹಾಗೂ ಧಾರ್ಮಿಕ ಗುರುಗಳು ದೇಣಿಗೆ, ದಾನ ಪಡೆಯಬಾರದು ಎಂದು ಮುಸ್ಲಿಂ ಸಮುದಾಯದ ಕೆಲ ನಾಯಕರು ಒತ್ತಾಯಿಸಿದ್ದಾರೆ.
ಸ್ಪಷ್ಟೀಕರಣದಲ್ಲೂ ನಾಟಕ!?
ಇನ್ನು ಕರಾಳ ದಂಧೆಯ ಆಡಿಯೋ ವೈರಲ್ ಆಗುತ್ತಲೇ ಶರೂನ್ ಶಾಹಿದ್ ಬದ್ಯಾರ್ ಅನ್ನೋ ಮ್ಯಾನ್ ಪವರ್ ನಡೆಸುತ್ತಿರುವ ವ್ಯಕ್ತಿ ಸ್ಪಷ್ಟೀಕರಣ ನೀಡಿದ್ದು, ಅದರಲ್ಲಿ ಚೆಕ್ ವಿಚಾರವಾಗಿ ಮಾತನಾಡಿದ್ದಾರೆ. ರಾಹಿಫ್ ಮೋಸ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತ ಯುವಕನ ಜೊತೆ ಮಾತಾಡುವ ವೇಳೆ ಈ ವಿಚಾರವೇ ಬಂದಿರಲಿಲ್ಲ. ಆಡಿಯೋದಲ್ಲಿ ಆ ವಿಷಯಗಳೇ ಪ್ರಸ್ತಾಪವಾಗಿಲ್ಲ. ಹಾಗಾಗಿ ಇದು ಮ್ಯಾನ್ ಪವರ್ ನಡೆಸುವ ವ್ಯಕ್ತಿಗಳು ಕೆಲಸದಾಳುಗಳ ಮೇಲೆ ಸುಖಾ ಸುಮ್ಮನೆ ಹೊರಿಸುವ ಆರೋಪಗಳು ಅಂತಾ ಸೌದಿಯ ಅನಿವಾಸಿ ಭಾರತೀಯರೊಬ್ಬರು ತಿಳಿಸಿದ್ದಾರೆ.
ವೀಡಿಯೋ ವೀಕ್ಷಿಸಿ