-->
MANGALORE:  ಚುನಾವಣೆ ಹೊಸ್ತಿಲಲ್ಲೇ ಸಿಡಿಯಲಿದೆ ಕರಾವಳಿಯ ಶಾಸಕರ ವೀಡಿಯೋ ಬಾಂಬ್!?

MANGALORE: ಚುನಾವಣೆ ಹೊಸ್ತಿಲಲ್ಲೇ ಸಿಡಿಯಲಿದೆ ಕರಾವಳಿಯ ಶಾಸಕರ ವೀಡಿಯೋ ಬಾಂಬ್!?



ಮಂಗಳೂರು: ರಾಜಕೀಯ ವಲಯದಲ್ಲಿ ಮತ್ತೆ ಸಿಡಿ ಚರ್ಚೆ ಆರಂಭವಾಗಿದೆ. ಆದರೆ, ಈ ಬಾರಿ ಈ ಸಿಡಿ ದಾಳಕ್ಕೆ ಸಿಲುಕಿಕೊಂಡವರು ಕರಾವಳಿ ಭಾಗದ ಶಾಸಕರು ಎಂಬ ಗುಸು ಗುಸು ಶುರುವಾಗಿದೆ. ಮಾಹಿತಿಯೊಂದರ ಪ್ರಕಾರ, ಇಬ್ಬರು ಕರಾವಳಿ ಭಾಗದ ಶಾಸಕರ ವೀಡಿಯೋ ಇದೆ ಎನ್ನಲಾಗುತ್ತಿದೆ. 

ಇದು ಆ ಪಕ್ಷಗಳ ಮಾರ್ಗದರ್ಶಕ ಸಂಸ್ಥೆಗೂ ತಿಳಿದಿದೆ ಎನ್ನಲಾಗಿದೆ. ಹೀಗಾಗಿ ಅಂತಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಾರದೆನ್ನುವ ಚರ್ಚೆಯೂ ನಡೆಯುತ್ತಿದೆ ಎನ್ನಲಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರೇ ಇಂತಹ ಎಡವಟ್ಟು ಮಾಡಿಕೊಂಡಿದ್ದಾಗಿಯೂ ಹೇಳಲಾಗುತ್ತಿದೆ. ಇಬ್ಬರು ಶಾಸಕರ ವೀಡಿಯೋ ಇದೆ ಎನ್ನಲಾಗುತ್ತಿದ್ದರೂ, ಅದರಲ್ಲಿ ಓರ್ವ ಶಾಸಕರ ಸಿಡಿ ಸಂಘಟನೆಯ ನಾಯಕರೊಬ್ಬರ ಜೊತೆಗಿರುವುದಾಗಿಯೂ ಹೇಳಲಾಗುತ್ತಿದೆ. 

ಆದ್ದರಿಂದ, ಚುನಾವಣೆ ಹತ್ತಿರ ಬರ್ತಿದ್ದಂತೆ ಯಾವ ಹೊತ್ತಿಗೂ ಬೇಕಿದ್ದರೂ ಸಿಡಿ ಬಾಂಬ್ ಸ್ಫೋಟಗೊಳ್ಳಬಹುದು ಎನ್ನಲಾಗುತ್ತಿದೆ. 

ಈ ಹಿಂದೆ ಕರಾವಳಿ ಭಾಗದ ಓರ್ವ ಶಾಸಕರು ಸದನದಲ್ಲಿ ಬ್ಲೂ ಫಿಲಂ ಹಾಗೂ ಇನ್ನೋರ್ವ ಶಾಸಕರ ಸಿಡಿ ಕಾರಣದಿಂದಾಗಿ ಸೋಲನುಭವಿಸಿದ್ದು ಮರೆಯುವಂತಿಲ್ಲ.

Ads on article

Advertise in articles 1

advertising articles 2

Advertise under the article