MANGALORE: ಗುರುಪುರದಲ್ಲಿ ಭೀಕರ ಅಪಘಾತ; ಇಬ್ಬರು ಸಾವು
Monday, December 5, 2022
ಮಂಗಳೂರು: ಲಾರಿಗಳೆರಡು ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪಿದ ಘಟನೆ ಮಂಗಳೂರಿನ ಗುರುಪುರ ಬಳಿ ನಡೆದಿದೆ. ಇಂದು ಬೆಳಗ್ಗೆ ಸರಕುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಹಾಗೂ ಮಣ್ಣು ಹೊತ್ತುಕೊಂಡು ಬರುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಹಾಗೆಯೇ ಗುರುಪುರ ಬಳಿ ಕಿರಿದಾದ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ, ಜೊತೆಗೆ ತಿರುವುಗಳು ಹೆಚ್ಚು ಇರುವುದರಿಂದ ಏಕಾಏಕಿ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಪರಿಣಾಮ ಎರಡೂ ಲಾರಿಗಳು ಢಿಕ್ಕಿ ಹೊಡೆದಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮಣ್ಣು ಜರಿದು ಅಪಾಯ ಬಾಯ್ದೆರೆದಿತ್ತು. ಈ ಬಗ್ಗೆ ಸ್ಥಳೀಯ ಶಾಸಕರಲ್ಲೂ ಸರಿಪಡಿಸುವಂತೆ ಸ್ಥಳೀಯರು ಕೇಳಿಕೊಂಡಿದ್ದರು. ಆದ್ರೆ ಇಂದು ಅದೇ ಭಾಗದಲ್ಲಿ ರಸ್ತೆ ಅಪಘಾತ ಸಂಭವಿಸಿ ಲಾರಿ ಆ ಜರಿದ ಮಣ್ಣಿನ ಭಾಗದಲ್ಲಿ ಸಿಲುಕಿ ಹಾಕಿಕೊಂಡು ಮೇಲೆಕ್ಕೆತ್ತಲು ಹರಸಾಹಸ ಪಡುವಂತಾಯಿತು.
