ಮಂಗಳೂರು: ಜಲೀಲ್ ಹತ್ಯೆ ಪ್ರಮುಖ ಆರೋಪಿ ಲಕ್ಷ್ಮೀಶ ದೇವಾಡಿಗ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಮಂಗಳೂರು: ವ್ಯಾಪಾರಿ ಜಲೀಲ್ ಕೃಷ್ಣಾಪುರ ಹತ್ಯೆ ಪ್ರಕರಣದ ಪ್ರಮುಖ
ಆರೋಪಿ ಲಕ್ಷ್ಮೀಶ ದೇವಾಡಿಗನನ್ನು ನ್ಯಾಯಾಲಯವು 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ನಿನ್ನೆಯಷ್ಟೇ ಬಂಧಿಸಲ್ಪಟ್ಟಿದ್ದ ಲಕ್ಷ್ಮೀಶ ದೇವಾಡಿಗ ಈ ಹತ್ಯೆ ಪ್ರಕರಣದ
ಪ್ರಮುಖ ಸೂತ್ರಧಾರನಾಗಿದ್ದ. ಈತ ವಾರದ ಹಿಂದೆ ಜಲೀಲ್ ಅವರ ಬಳಿಗೆ ತೆರಳಿ ಗಲಾಟೆ ಎಬ್ಬಿಸಿ, ಕೊಲೆ
ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.
ಸದ್ಯ ಸುರತ್ಕಲ್ ಪೊಲೀಸರು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಪಡೆದಿದ್ದು, ಜಲೀಲ್ ಹತ್ಯೆ ಹಿಂದಿನ ನಿಖರ ಕಾರಣ ತಿಳಿದು ಬರಲಿದೆ. ಲಕ್ಷ್ಮೀಶ ದೇವಾಡಿಗ ಕೃಷ್ಣಾಪುರದ
ನಾಲ್ಕನೇ ವಾರ್ಡ್ ನಿವಾಸಿಯಾಗಿದ್ದು, ಕಳೆದ ವರ್ಷ ನಡೆದಿದ್ದ ಪಿಂಕಿ ನವಾಝ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು.
ಜಲೀಲ್ ಹತ್ಯೆ ಪ್ರಕರಣದ ಸಂಬಂಧ ಇದುವರೆಗೆ ನಾಲ್ಕು ಮಂದಿಯನ್ನು ಅರೆಸ್ಟ್
ಮಾಡಲಾಗಿದ್ದು, ಅದರಲ್ಲಿ ಶೈಲು ಪೂಜಾರಿ, ಸುವಿನ್ ಕಾಂಚನ್ ಕೂಡಾ ಪಿಂಕಿ ನವಾಝ್ ಕೊಲೆ ಯತ್ನ ಸೇರಿದಂತೆ
ಹಲವು ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ.
ಡಿಸೆಂಬರ್ 24ರ ರಾತ್ರಿ ಜಲೀಲ್ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿತ್ತು.