-->
ಮುಖ್ಯಮಂತ್ರಿಗಳ ‘‘ಕ್ರಿಯೆಗೆ ಪ್ರತಿಕ್ರಿಯೆ‘‘ ಹೇಳಿಕೆಯೇ ಅಪರಾಧ ಹೆಚ್ಚಲು ಕಾರಣ: ಇಲ್ಯಾಸ್ ತುಂಬೆ ಗಂಭೀರ ಆರೋಪ

ಮುಖ್ಯಮಂತ್ರಿಗಳ ‘‘ಕ್ರಿಯೆಗೆ ಪ್ರತಿಕ್ರಿಯೆ‘‘ ಹೇಳಿಕೆಯೇ ಅಪರಾಧ ಹೆಚ್ಚಲು ಕಾರಣ: ಇಲ್ಯಾಸ್ ತುಂಬೆ ಗಂಭೀರ ಆರೋಪ

 


ಮಂಗಳೂರು: ಇತ್ತೀಚೆಗೆ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಖಂಡಿಸಿ ಎಸ್.ಡಿ.ಪಿ. ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ದೇರಳಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ನೀಡಿದ್ದ ಕ್ರಿಯೆಗೆ- ಪ್ರತಿಕ್ರಿಯೆ ಹೇಳಿಕೆ ಕರ್ನಾಟಕ ರಾಜ್ಯದಲ್ಲಿ ಹಲವು ಘಟನೆಗಳಿಗೆ ಕಾರಣವಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದವು ರೀತಿಯಾಗಿ ಬೆಳೆಯಲು ಕಾರಣವಾಗುತ್ತಿದೆ. ದಿನೇ ದಿನೇ ಜಿಲ್ಲೆಯಲ್ಲಿ ಕೋಮುವಾದದಿಂದ ಅಪರಾಧಗಳು ಹೆಚ್ಚುತ್ತಿರುವಾಗ ಪೊಲೀಸ್ ಇಲಾಖೆಯು ಅಪರಾಧಿಗಳಿಗೆ ಕಠಿಣ ಕಾಯ್ದೆಯನ್ವಯ ಬಂಧಿಸದ ಕಾರಣ ರೀತಿ ಅಮಾಯಕರ ಕೊಲೆಗಳಾಗುತ್ತಿದೆ ಎಂದು ಆರೋಪಿಸಿದರು.

‘‘ಸರಕಾರದ ತಾರತಮ್ಯ ನಿಲುವುಗಳು , ಸಂಘಪರಿವಾರದ ನಾಯಕರ ಪ್ರಚೋದನಕಾರಿ ಭಾಷಣಗಳು ಫ್ಯಾಶಿಸ್ಟ್ ಗೂಂಡಾಗಳಿಗೆ ಪ್ರೇರಣೆಯಾಗಿದೆ. ಹಿಂದುತ್ವ ಶಕ್ತಿಗಳ ಗೂಂಡಾ ಸಂಸ್ಕೃತಿಗೆ ಪೋಲಿಸ್ ಇಲಾಖೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಪ್ರಜ್ಞಾವಂತ ಜನತೆಯ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾದ ದಕ್ಷಿಣ ಕನ್ನಡ ಜಿಲ್ಲೆಯು ಮುಂದಿನ ದಿನಗಳಲ್ಲಿ ದುಷ್ಕರ್ಮಿಗಳ ತವರೂರು ಆಗಲಿದೆ‘‘ ಎಂದು ಆತಂಕ ವ್ಯಕ್ತಪಡಿಸಿದರು.  


ಪ್ರತಿಭಟನೆ ಸಭೆಯ ನೇತೃತ್ವವನ್ನು SDPI ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ವಹಿಸಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ , ಜಿಲ್ಲಾ ಸಮಿತಿ ಸದಸ್ಯ ನಾಸಿರ್ ಸಜಿಪ , ಮಂಗಳೂರು ಅಸೆಂಬ್ಲಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಸಜಿಪನಡು  ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ S.N, ಉಳ್ಳಾಲ ನಗರಸಭಾ ಸದಸ್ಯರಾದ ಅಸ್ಗರ್ ಅಲಿ, ರಮೀಝ್, ಕ್ಷೇತ್ರ ಸಮಿತಿ ಸದಸ್ಯ ನೌಶಾದ್ ಕಿನ್ಯ ಇದ್ದರು.

Ads on article

Advertise in articles 1

advertising articles 2

Advertise under the article