PUTTUR: ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದ ಚೈತ್ರ ಕೆ. ಬ್ಯಾನೆರ್ ಗೆ ಕಲ್ಲೆಸೆದು ಹಾನಿ
Wednesday, December 21, 2022
ಪುತ್ತೂರು: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಕಾನ್ಸ್ಸ್ಟೆಬಲ್ ಆಗಿ ನೇಮಕಗೊಂಡಿದ್ದ ಕಕುಂಜದ ಚೈತ್ರ ಕೆ. ಅವರಿಗೆ ಶುಭಕೋರಿ ಹಾಕಲಾಗಿದ್ದ ಬ್ಯಾನೆರ್ ಗೆ ಕಿಡಿಗೇಡಿಗಳು ಕಲ್ಲೆಸೆದು ವಿಕೃತಿ ಮೆರೆದಿರುವ ಘಟನೆ ಪುತ್ತೂರಿನ ಬಪ್ಪಳಿಗೆ ಸಮೀಪದ ಕರ್ಕುಂಜದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಸ್ಟಾಫ್ ಸೆಲೆಕ್ಷನ್ ಕಮಿಷನ್-2022ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಚೈತ್ರ ಕೆ ಅವರು ಉತ್ತೀರ್ಣರಾಗಿ ಪುತ್ತೂರು ತಾಲೂಕಿಗೆ ಹೆಮ್ಮೆ ಎಂಬಂತೆ ಆಯ್ಕೆಯಾಗಿದ್ದಾರೆ. ಹೀಗಿರುವಾಗ ಅವರ ಈ ಸಾಧನೆಯನ್ನ ಎಲ್ಲರೂ ಕೊಂಡಾಡಬೇಕಿದೆ. ಆದ್ರೆ ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ಸಮಯದಲ್ಲಿ ಬ್ಯಾನೆರ್ ಗೆ ಕಲ್ಲೆಸೆದು ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ಇನ್ನು ಘಟನೆ ಬಗ್ಗೆ ಈಗಾಗ್ಲೇ ಕಿಡಿಗೇಡಿಗಳ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
.jpeg)
