ಮಂಗಳೂರು: ಜನವರಿ ಮೊದಲ ವಾರ ಪುರಭವನದಲ್ಲಿ ‘ಟಿಪ್ಪು ನಿಜ ಕನಸುಗಳು‘ ಪ್ರದರ್ಶನ
Wednesday, December 21, 2022
ಮಂಗಳೂರು:
ರಂಗಾಯಣ ಮೈಸೂರು ಇದರ ಈ ಸಾಲಿನ ವಿವಾದಾತ್ಮಕ ನಾಟಕ ‘ಟಿಪ್ಪು ನಿಜ ಕನಸುಗಳು‘ ಇದೀಗ ಮೊಟ್ಟ ಮೊದಲ ಬಾರಿಗೆ
ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಅಡ್ಡಂಡ ಕಾರ್ಯಪ್ಪ
ರಚಿಸಿ, ನಿರ್ದೇಶಿಸಿರುವ ಈ ನಾಟಕವು ಮುಂದಿನ ವರ್ಷದ ಜನವರಿ 04 ಮತ್ತು 05 ರಂದು ನಗರದ ಹಂಪನಕಟ್ಟೆ
ಬಳಿ ಇರುವ ಕುದ್ಮುಲ್ ರಂಗರಾವ್ ಪುರಭವದನಲ್ಲಿ ಪ್ರದರ್ಶನ ಕಾಣಲಿದೆ. ಈ ಎರಡೂ ದಿನವು ಸಂಜೆ 6 ಗಂಟೆಗೆ
ನಾಟಕವು ಆರಂಭವಾಗಲಿದೆ. ಟಿಕೆಟ್ ದರ ₹100 ನಿಗದಿಪಡಿಸಲಾಗಿದೆ. ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೂ
ಅವಕಾಶ ನೀಡಲಾಗಿದೆ. ನಾಟಕವು ಮೂರು ತಾಸಿನದ್ಧಾಗಿದೆ ಎಂದು ರಂಗಾಯಣವು ತಿಳಿಸಿದೆ.
ಜನವರಿ 19ರ
ಸಾಯಂಕಾಲ ಪುತ್ತೂರು ವಿವೇಕಾನಂದ ಕಾಲೇಜು ಬಯಲು ರಂಗ ಮಂದಿರದಲ್ಲಿ ‘ಟಿಪ್ಪು ನಿಜ ಕನಸುಗಳು‘ ನಾಟಕ
ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ಮೈಸೂರು ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.