
MANGALORE: ದೇರಳಕಟ್ಟೆಯ ವಸತಿ ಸಮುಚ್ಚಯದಲ್ಲಿ ತಪ್ಪಿದ ಭಾರೀ ಅಗ್ನಿ ಅವಘಡ!
Wednesday, December 21, 2022
ಮಂಗಳೂರು: ಮಂಗಳೂರು ಹೊರವಲಯದ ದೇರಳಕಟ್ಟೆಯ ಫ್ಲಾಟ್ ವೊಂದರಲ್ಲಿ ಭಾರೀ ಅಗ್ನಿ ಅವಘಡವೊಂದು ಫ್ಲಾಟ್ ಮ್ಯಾನೇಜರ್ ನ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಫ್ಲಾಟ್ ನಲ್ಲಿ ಇಬ್ಬರು ದಂತ ವೈದ್ಯಕೀಯ ವಿದ್ಯಾರ್ಥಿನಿಯರು ವಾಸವಾಗಿದ್ದರು. ಇವರು ಬಟ್ಟೆಗೆ ಇಸ್ತ್ರಿ ಹಾಕಿ ಸ್ವಿಚ್ ಆಫ್ ಮಾಡಿ ಇಸ್ತ್ರಿ ಪೆಟ್ಟಿಗೆಯನ್ನ ಬೆಡ್ ಮೇಲೆ ಇಟ್ಟಿದ್ದರು. ಆದ್ರೆ ಇಸ್ತ್ರಿ ಪೆಟ್ಟಿಗೆಯ ಬಿಸಿಗೆ ಬೆಂಕಿ ಹತ್ತಿಕೊಂಡು ಹಬ್ಬಿದೆ.
ಈ ವೇಳೆ ಫ್ಲಾಟ್ ನ ಮ್ಯಾನೇಜರ್ ಶಾಹೀದ್ ಎಂಬವರು ರೂಂನಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಕಂಡು ಓಡೋಡಿ ಬಂದಿದ್ದಾರೆ. ತಕ್ಷಣ ವಿದ್ಯಾರ್ಥಿಯರನ್ನ ಕರೆದು ರೂಂನ ಬಾಗಿಲನ್ನ ಓಪನ್ ಮಾಡಿಸಿದ್ದಾರೆ. ಬಳಿಕ ಕೊಠಡಿಗೆ ತೆರಳಿ ಬೆಂಕಿ ಆರಿಸಿ ತನ್ನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.