"ಗೆಲುವು ನಮ್ಮದು, ಗೆಲುವು ನಮ್ಮದು ಎಂದಿಗೂ.. ಎಂದೆಂದಿಗೂ.." : ಟೋಲ್ ಹೋರಾಟಗಾರರ ಸಂಭ್ರಮ
Thursday, December 1, 2022
ಮಂಗಳೂರು: NITK ಟೋಲ್ ವಿರೋಧಿ ಹೋರಾಟಗಾರರ ಪಾಲಿಗೆ ನವೆಂಬರ್ 30 ರಾತ್ರಿಯೇ ಹೊಸ ವರ್ಷಕ್ಕೆ ನಾಂದಿ ಹಾಡಿದಂತಿತ್ತು. ಕುಣಿದು ಕುಪ್ಪಳಿಸುತ್ತಾ, 'ಗೆಲುವು ನಮ್ಮದು' ಹಾಡು ಹಾಡುತ್ತಾ, ಸುಡುಮದ್ದು ಸಿಡಿಸುತ್ತಾ ಹೋರಾಟಗಾರರು ಖುಷಿಪಟ್ಟರು.
ಸುರತ್ಕಲ್ ಟೋಲ್ ಗೇಟ್ ಅನ್ನು ರದ್ದು ಮಾಡಿದ ಹಿನ್ನೆಲೆ ಬುಧವಾರ ತಡರಾತ್ರಿ ಟೋಲ್ ಬಳಿ ಸೇರಿದ ನೂರಾರು ಮಂದಿ ಮುನೀರ್ ಕಾಟಿಪಳ್ಳ, ಮೊಯ್ದಿನ್ ಬಾವಾ ಹಾಗೂ ಇನ್ನಿತರ ಹೋರಾಟಗಾರರನ್ನು ಎತ್ತಿ ಸಂಭ್ರಮಿಸಿದರು. ರಾತ್ರಿ 12 ಆಗುತ್ತಲೇ ಜಯ ಘೋಷದೊಂದಿಗೆ ಸುಡುಮದ್ದುಗಳು ಸಿಡಿದವು.
ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್ ನೊಂದಿಗೆ ಸುರತ್ಕಲ್ ಟೋಲ್ ವಿಲೀನವಾಗಲಿದೆ.
ವೀಡಿಯೋ ವೀಕ್ಷಿಸಿ