MANGALORE: ಮಂಗಳೂರಿನಲ್ಲಿ SDPI ಪಕ್ಷ ಬಲಿಷ್ಠವಾಗಿದೆ ಎಂದ ಬಿಜೆಪಿ ಮುಖಂಡ!?
ಮಂಗಳೂರು: ರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಹೀಗಿರುವಾಗ್ಲೇ ಮಂಗಳೂರಿನ ಬಿಜೆಪಿ ಮುಖಂಡರೋರ್ವರು ಈ ಬಾರಿ ನಮ್ಗೆ ಏನಿದ್ರೂ ಕಾಂಗ್ರೆಸ್ ಪೈಪೋಟಿಯಲ್ಲ, ಬದಲಾಗಿ ಎಸ್ ಡಿ ಪಿಐ ಪಕ್ಷವೇ ನೇರಾ ನೇರ ಸವಾಲು ಅಂತ ಅಚ್ಚರಿಯ ಹೇಳಿಕೊಂದನ್ನ ನೀಡಿದ್ದಾರೆ.
ಎಸ್ ಡಿಪಿಐ ಬೇರು ಹಳ್ಳಿ ಹಳ್ಳಿಗಳಲ್ಲಿ ಪಸರಿಸಿದೆ. ನಾವೆಲ್ಲ ಹಳ್ಳಿ ಕಡೆ ಹೋದ್ರೆ ಎಸ್ ಡಿಪಿಐ ಎಷ್ಟು ಬಲಿಷ್ಠವಾಗಿದೆ ಅಂತ ತಿಳಿಯುತ್ತೆ. ಇಲ್ಲಿ ನಗರಗಳಲ್ಲಿ ಅಷ್ಟೆನೂ ಎಸ್ ಡಿಪಿಐ ಬಗ್ಗೆ ಗಮನಹರಿಸದಿದ್ರೂ ಕೂಡ ಹಳ್ಳಿಗಳಲ್ಲಿ ತುಂಬಾ ಬಲಿಷ್ಠ ಪಕ್ಷವಾಗಿ ಮುನ್ನುಗುತ್ತಿದೆ ಎಂದು ಆತಂಕವನ್ನ ಹೊರಹಾಕಿದ್ರು.
ಹೌದು ಸುದ್ದಿಗೋಷ್ಠೀಯಲ್ಲಿ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಮಂಗಳೂರು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಗೆ ನಮಗೆ ಎಸ್ ಡಿಪಿಐ ಪಕ್ಷ ಎದುರಾಳಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಇಲ್ಲಿ ಸಿದ್ದರಾಮಯ್ಯನವರು ಬೇಕಾದ್ರು ಬಂದು ನಿಲ್ಲಲಿ ಅವರನ್ನೂ ಬಿಜೆಪಿ ಈ ಬಾರಿ ಸೋಲಿಸುತ್ತದೆ ಅಂತ ಹೇಳಿದ್ದಾರೆ.
ಹಾಗಾಗಿ ಈ ಬಾರಿ ಕಾಂಗ್ರೆಸ್ ನ ಸೋಲಿಲ್ಲದ ಸರದಾರ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಗೆ ಸೋಲು ಪಕ್ಕ ಅನ್ನೋ ದಾಟಿಯಲ್ಲಿ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಮಾತನಾಡಿದ್ದಾರೆ. ಹೀಗಿರುವಾಗ ಯು.ಟಿ. ಖಾದರ್ ಸೋಲಿಗೆ ಎಸ್ ಡಿಪಿಐ ನೇರ ಕಾರಣವಾಗುತ್ತಾ ಅನ್ನೋದನ್ನ ಮುಂದಿನ ದಿನಗಳಲ್ಲಿ ನೋಡಬೇಕಿದೆ.