MANGALORE: ಕುಕ್ಕರ್ ಬಾಂಬ್ ಆರೋಪಿ ಪರ ವಕಾಲತ್ತು ಮಾಡ್ಬೇಡಿ!?
Thursday, December 1, 2022
ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ನ ಆರೋಪಿ ಮೊಹಮ್ಮದ್ ಶಾರೀಕ್ ಮತ್ತು ಅವನಿಗೆ ಸಹಕರಿಸಿದ ಆರೋಪಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ವಕೀಲರ ಸಂಘಕ್ಕೆ ಮನವಿ ಕೊಟ್ಟು ಆಗ್ರಹಿಸಿದೆ.
ಈಗಾಗ್ಲೇ ಶಾರೀಕ್ ಎಂಬಾತನ ಕೃತ್ಯದಿಂದ ಮಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಹೀಗಿರುವಾಗ ಆತನಿಗಿರುವ ಉಗ್ರ ಸಂಘಟನೆಗಳ ಸಂಪರ್ಕ ಈಗಾಗ್ಲೇ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ದೇಶದ ಕಾನೂನನ್ನು ಗೌರವಿಸದೆ ಇರುವ ಉಗ್ರ ಶಾರೀಕ್ ಕೃತ್ಯ ಸಮಾಜದಲ್ಲಿ ಅಶಾಂತಿವುಂಟುಮಾಡಿದೆ. ಹಾಗಾಗಿ ಭಯೋತ್ಪಾದನೆಯಂತ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಶಾರೀಕ್ ಪರ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ಮಾಡದಂತೆ ವಕೀಲರ ಸಂಘ ಕರೆ ನೀಡಬೇಕು ಎಂದು ಬಜರಂಗದಳ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಮತ್ತು ಬಜರಂಗಳದ ಕಾರ್ಯಕರ್ತರು ವಿನಂತಿಸಿಕೊಂಡಿದ್ದಾರೆ.