MANGALORE: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ; ಎನ್ ಐಎಗೆ ಹಸ್ತಾಂತರ
ಮಂಗಳೂರು: ಮಂಗಳೂರು ಆಟೋದಲ್ಲಿ ಆದ ಬಾಂಬ್ ಸ್ಫೋಟ ಪ್ರಕರಣವನ್ನ ಅಧಿಕೃತವಾಗಿ ಎನ್ ಐಎಗೆ ಹಸ್ತಾಂತರಿಸಲಾಗಿದೆ. ಈಗಾಗ್ಲೇ ಮಂಗಳೂರಿನಲ್ಲಿ ಬೀಡುಬಿಟ್ಟಿರುವ ಎನ್ ಐಎ ತಂಡ ತನಿಖೆ ಆರಂಭಗೊಳಿಸಿದೆ. ಬೆಳಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಎನ್ ಐಎ ತಂಡ ಆಗಮಿಸಿದ್ರು. ಬಳಿಕ ಕಮಿಷನರ್ ಎನ್. ಶಶಿಕುಮಾರ್ ಕೇಸ್ ಅನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ಬಳಿಕ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಡಿ.ಜಿ. ಕಚೇರಿಯ ಸೂಚನೆಯಂತೆ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರಿಸಲಾಗಿದೆ. ನಿನ್ನೆ ಶಾರೀಕ್ ನನ್ನು ಕೆಲ ಕಾಲ ವಿಚಾರಣೆ ಮಾಡಿದ್ದೇವೆ. ಹಲವಾರು ಪ್ರಶ್ನೆಗಳನ್ನ ಶಾರೀಕ್ ಗೆ ಕೇಳಲಾಗಿದೆ. ವೈದ್ಯರು ಕೂಡ ಶಾರೀಕ್ ಫಿಟ್ ಆಗಿದ್ದಾನೆ. ಪ್ರಶ್ನೆ ಮಾಡಬಹುದು ಅಂತ ಹೇಳಿದ್ರು. ಹಾಗೆಯೇ ಶಾರೀಕ್ ಕೂಡಾ ನಮ್ಮ ಪ್ರಶ್ನೆಗಳಿಗೆ ಉತ್ತರವನ್ನ ನೀಡಿದ್ದಾನೆ. ಇನ್ನು ಮುಂದೆ ಪ್ರಕರಣವನ್ನ ಎನ್ ಐಎ ಅಧಿಕಾರಿಗಳು ನಡೆಸಲಿದ್ದಾರೆ. ಜೊತೆಗೆ ಎನ್ ಐಎ ಅಧಿಕಾರಿಗಳಿಗೆ ಆಯ್ದ ಅಧಿಕಾರಿ, ಸಿಬ್ಬಂದಿಯನ್ನು ತನಿಖೆಗೆ ನೀಡಲಿದ್ದೇವೆ ಎಂದರು.
ಇನ್ನು ಶಾರೀಕ್ ಆರೋಗ್ಯದ ಬಗ್ಗೆ ಈಗ್ಲೇ ಹೇಳಲು ಸಾಧ್ಯವಿಲ್ಲ. ಸುಟ್ಟ ಗಾಯ ಆಗಿರೋದ್ರಿಂದ ಆರೋಗ್ಯ ಸೂಕ್ಷö್ಮವಾಗಿರುತ್ತದೆ. ಶಾರೀಕ್ ಗೆ ಸುಮಾರು ಶೇ.40ರಷ್ಟು ಸುಟ್ಟ ಗಾಯವಾಗಿದೆ ಎಂದು ತಿಳಿಸಿದ್ರು.
