-->
MANGALORE:  ಬಜರಂಗದಳ ಕಾರ್ಯಕರ್ತರಿಂದ ಅನ್ಯಕೋಮಿನ ಯುವಕನ ಮೇಲೆ ಅಟ್ಯಾಕ್!?

MANGALORE: ಬಜರಂಗದಳ ಕಾರ್ಯಕರ್ತರಿಂದ ಅನ್ಯಕೋಮಿನ ಯುವಕನ ಮೇಲೆ ಅಟ್ಯಾಕ್!?

 


ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಮತ್ತೆ ಬಜರಂಗದಳ ಕಾರ್ಯಕರ್ತರು ಅನ್ಯಕೋಮಿನ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಇಂದು ನಡೆದಿದೆ. 

ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ನಗರದ ಸುಲ್ತಾನ್ ಜ್ಯುವೆಲ್ಲರಿನಲ್ಲಿ ಪತ್ತೆಯಾಗಿದ್ರು. ಈ ಬಗ್ಗೆ ಮಾಹಿತಿ ತಿಳಿದು ಜ್ಯುವೆಲ್ಲರಿ ಒಳ ನುಗ್ಗಿದ ಬಜರಂಗದಳ ಕಾರ್ಯಕರ್ತರು ಹಿಂದು ಯುವತಿ ಹಾಗೂ ಮುಸ್ಲಿಂ ಯುವಕನನ್ನ ಪ್ರಶ್ನಿಸಿದ್ದಾರೆ. ಬಳಿಕ ಜ್ಯುವೆಲ್ಲರಿ ಒಳ ಭಾಗದಲ್ಲೇ ಮುಸ್ಲಿಂ ಯುವಕನಿಗೆ ಥಳಿಸಿದ್ದಾರೆ. ಈ ಮೂಲಕ ಮತ್ತೆ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ಜೋಡಿ ಪತ್ತೆಯಾದ ಬಳಿಕ ಯುವತಿಯ ಮನೆಯವರು ಬಂದು ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ಏಕಾಏಕಿ ಬಜರಂಗದಳ ಕಾರ್ಯಕರ್ತರು ಯುವಕನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಈಗಾಗ್ಲೇ ಕಳೆದ ಒಂದು ವಾರದ ಹಿಂದೆಯಷ್ಟೇ ಬಜರಂಗದಳ ಕಾರ್ಯಕರ್ತರು ಹಿಂದು ಯುವತಿಯರ ತಂಟೆಗೆ ಬಂದ್ರೆ ಮೈಯತ್ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬಜರಂಗದಳದ ಕಾರ್ಯಕರ್ತರ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದಾದ ಬಳಿಕ ಇದೀಗ ಮತ್ತೆ ಮುಸ್ಲಿಂ ಯುವಕನಿಗೆ ಥಳಿಸಿದ್ದಾರೆ. ಪೊಲೀಸ್ ಇಲಾಖೆ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಮೀನಾಮೇಷ ಎಣಿಸುತ್ತಿದೆ. 

Ads on article

Advertise in articles 1

advertising articles 2

Advertise under the article