MANGALORE: ಸಮಾಜ ಕಾರ್ಯ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ
Tuesday, December 6, 2022
ಮಂಗಳೂರು: `ಕ್ಷೇತ್ರ ಕಾರ್ಯ ಸಮಾಜ ಕಾರ್ಯದ ಜೀವಾಳ' ಎಂದು ರೋಶನಿ ನಿಲಯದ ವಿಶ್ರಾಂತ ಪ್ರಾಂಶುಪಾಲ ರೀಟಾ ನೊರೋನ್ಹಾ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ, ಮಂಗಳೂರು ಜಂಟಿ ನಿರ್ದೇಶನಾಲಯ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ `ವೃತ್ತಿಪರ ಸಮಾಜಕಾರ್ಯ ಸಮಕಾಲೀನ ಸವಾಲುಗಳು ಮತ್ತು ಸನ್ನದ್ಧತೆ' ಒಂದು ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನ ಲಯನ್ಸ್ ಕ್ಲಬ್ ನ ಎಂ.ಅರುಣ್ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗುರುಪ್ರಿತ್, ಡಾ.ಯಶಸ್ವಿನಿ ಭಾಗವಹಿಸಿದ್ರು. ಇನ್ನು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಪೌಲ್ ಜಿ ಅಕ್ವಿನಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಉಷಾರಾಣಿ, ಡಾ.ಹರೀಶ್ ಕೆ, ಶರತ್ ಕುಮಾರ್, ವಿನುತಾ, ಶೀನಾ ಪೂಜಾರಿ ಭಾಗವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.