MANGALORE: ಅಯ್ಯಪ್ಪ ಮಾಲಾಧಾರಿಗೆ ಹಲ್ಲೆ; ಕೆಪಿಟಿ ಕಾಲೇಜಿನಲ್ಲಿ ಪ್ರತಿಭಟನೆ
ಮಂಗಳೂರು: ಅಯ್ಯಪ್ಪ ಮಾಲಾಧಾರಿ ಎಬಿವಿಪಿ ಮುಖಂಡನಿಗೆ ಪ್ರಾಂಶುಪಾಲರು ಹಲ್ಲೆ ಮಾಡಿದಂತ ಘಟನೆ ಮಂಗಳೂರಿನ ಕೆಪಿಟಿಯಲ್ಲಿ ನಡೆದಿದೆ. ಎಬಿವಿಪಿ ಮುಖಂಡ ನಿಶಾನ್ ಆಳ್ವ ಹಲ್ಲೆಗೊಳಗಾದವರು ಎನ್ನಲಾಗಿದೆ.
ಕೆಪಿಟಿ ಕಾಲೇಜಿನ ಸಮಸ್ಯೆ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು ಎಬಿವಿಪಿ ಮುಖಂಡ ನಿಶಾನ್ ಆಳ್ವ ಅವರ ಗಮನಕ್ಕೆ ತಂದಿದ್ದರು. ಹಾಗಾಗಿ ನಿಶಾನ್ ಆಳ್ವ ಇಂದು ಸಂಜೆ ಕಾಲೇಜಿಗೆ ಆಗಮಿಸಿ ಪ್ರಾಂಶುಪಾಲರಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಾಂಶುಪಾಲ ಹರೀಶ್ ಶೆಟ್ಟಿ ಉದ್ಧಟತನದಿಂದ ವರ್ತಿಸಿ ಎಬಿವಿಪಿ ಮುಖಂಡ ನಿಶಾನ್ ಆಳ್ವ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆ ಮಾಡಿರೋದನ್ನ ಖಂಡಿಸಿ ವಿದ್ಯಾರ್ಥಿಗಳು ಕೆಪಿಟಿ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪ್ರಾಂಶುಪಾಲರು ಕ್ಷಮೆ ಕೇಳಬೇಕೆಂದು ರಾತ್ರಿವರೆಗೂ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಧರಣಿ ಕೂತು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸಿ ಸಮಾಧಾನಪಡಿಸಿದ್ರೂ ವಿದ್ಯಾರ್ಥಿಗಳು ಕೇಳಲಿಲ್ಲ. ಕೊನೆಗೆ ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ರು.
.jpeg)