
MANGALORE: ಬಜರಂಗದಳದಿಂದ ಲವ್ ಜಿಹಾದ್ ವಿರುದ್ಧ ಹೆಲ್ಪ್ ಲೈನ್!
ಮಂಗಳೂರು: ಲವ್ ಜಿಹಾದ್ ಬಗ್ಗೆ ಕೆರಳಿರುವ ಕರಾವಳಿಯ ಹಿಂದೂ ಸಂಘಟನೆಗಳು ಅದಕ್ಕೆ ಬ್ರೇಕ್ ಹಾಕಲು ಹೆಲ್ಪ್ ಲೈನ್ ತಂತ್ರ ಮಾಡಿದೆ. ಹೌದು ಲವ್ ಜಿಹಾದ್ ಗೆ ಬಲಿಯಾಗುತ್ತಿರುವ ಸಹೋದರಿಯ ರಕ್ಷಣೆಗೆ ಅಂತ "ಲವ್ ಜಿಹಾದ್" ಹೆಲ್ಪ್ ಲೈನ್ ಅನ್ನೋ ಪೋಸ್ಟರ್ ಒಂದು ಕರಾವಳಿಯಾದ್ಯಂತ ಭಾರೀ ವೈರಲ್ ಆಗ್ತಿದೆ. ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ ಎಂಬ ಟ್ಯಾಗ್ ನಲ್ಲಿರುವ ಪೋಸ್ಟರ್ ನಲ್ಲಿ ವಾಟ್ಸಾಪ್ ಮತ್ತು ಮೊಬೈಲ್ ಸಂಖ್ಯೆ, ಇಮೇಲ್ ನ್ನು ಹಾಕಲಾಗಿದೆ.
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ.
* ನಮ್ಮ ಮನೆ, ನೆರೆಹೊರೆ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ.
* ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವ ಸಾಧ್ಯತೆ ಹೆಚ್ಚು, ಹಾಗಾಗಿ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ 9148658108, 9591658108 ಗೆ ಸಂಪರ್ಕಿಸಿ.
* ಹೆತ್ತವರು / ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಿ.
* ಲವ್ ಜಿಹಾದ್ ಪ್ರಕರಣಗಳ ವಿವರ / ಫೋಟೋ ಇತ್ಯಾದಿ ವಾಟ್ಸಪ್ಪ್ ಮೂಲಕ ಕಳುಹಿಸಬಹುದು.
* ಲವ್ ಜಿಹಾದ್ ಗೆ ಸಂಬಂಧಪಟ್ಟ ಯಾವುದೇ ಸಲಹೆ, ದೂರುಗಳನ್ನು Email ಮೂಲಕ ಕೂಡ ಕಳುಹಿಸಬಹುದು.
* ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುವುದು.
* ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು. ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ ಎಂಬ ಪೋಸ್ಟರ್ ಎಲ್ಲೆಡೆ ಹರಿದಾಡುತ್ತಿದೆ.