ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ; ನಮೋ ಭಾವುಕ ಟ್ವೀಟ್
Friday, December 30, 2022
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ (100) ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದರು . ಶತಾಯುಷಿಯಾದ ಹೀರಾಬೆನ್ ಅವರು ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು . ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಧಾನಿ ಮೋದಿ , " ಭವ್ಯವಾದ ಶತಮಾನವು ದೇವರ ಪಾದದಲ್ಲಿ ನೆಲೆಯಾಗಿದೆ ‘' ಎಂದು ಭಾವುಕರಾಗಿ ಬರೆದಿದ್ದಾರೆ .
ತಮ್ಮ ಚಿತ್ರವನ್ನು ಹಂಚಿಕೊಂಡ ಪ್ರಧಾನಿ , “ ಅಮ್ಮ ನಿಮ್ಮಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಕಂಡಿದ್ದೇನೆ , ಪ್ರಯಾಣ , ನಿಸ್ವಾರ್ಥ ಕರ್ಮಯೋಗಿಯ ಸಂಕೇತ ತಪಸ್ವಿಯ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನ‘‘ ಎಂದಿದ್ದಾರೆ.