ಪುತ್ತೂರು: RSS ಕೇಡರ್ ಅಶೋಕ್ ರೈ ಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್!
ಪುತ್ತೂರು: ರಾಜ್ಯ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ 14 ಮಂದಿಯ ಜತೆಗೆ ಕಾಂಗ್ರೆಸ್ ಪಕ್ಷದ ನಾಯಕರು ಡಿಸೆಂಬರ್ 26ರಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತುಕತೆ ನಡೆಸಲಾಗಿದೆ. ಪಕ್ಷದ ನಾಯಕರಾದ ರೆಹಮಾನ್ ಖಾನ್, ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ, ಚುನಾವಣಾ ಉಸ್ತವಾರಿ ಸಲೀಂ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಟಿಕೆಟ್ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಸಿದ 14ಮಂದಿಯ ಪೈಕಿ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಮೂವರ ಪಟ್ಟಿಯನ್ನ ಕೆಪಿಸಿಸಿ ರವಾನಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿ ಮತ್ತು ಎಐಸಿಸಿ ನಾಯಕರು ಅಂತಿಮವಾಗಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿ ಸಂಘ ಪರಿವಾರದ ನಾಯಕ ಅಶೋಕ್ ರೈ ಅವರ ಹೆಸರು ಕೇಳಿ ಬಂದಿದೆ. ಅಚ್ಚರಿ ಅಂದ್ರೆ ಇಷ್ಟಾದರೂ ಉದ್ಯಮಿ, ಆರ್.ಎಸ್.ಎಸ್ ಕೇಡರ್ ಅಶೋಕ್ ರೈ ಇದುವರೆಗೂ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಅದಾಗ್ಯೂ ಅವರು ಟಿಕೆಟ್ ಗಾಗಿ ಭಾರೀ ಲಾಬಿ ನಡೆಸುತ್ತಿದ್ದಾರೆ.
ಅರ್ಜಿ ಹಾಕಿದವರ
ಸಾಲಿನಲ್ಲೂ ಅಶೋಕ್ ರೈ ಇಲ್ಲ!
ಪುತ್ತೂರು ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲೂ ಅಶೋಕ್ ರಯ ಹೆಸರು ಇರಲಿಲ್ಲ. 13 ಮಂದಿ ಹೆಸರಷ್ಟೇ ಜಿಲ್ಲಾ ಕಾಂಗ್ರೆಸ್ ಸಮಿತಿ ನೀಡಿದ ಪಟ್ಟಿಯಲ್ಲಿತ್ತು. ಅದರಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಭರತ್ ಮುಂಡೋಡಿ, ಎಂ.ಎಸ್. ಮೊಹಮ್ಮದ್, ವಿಶ್ವನಾಥ ರೈ, ಧನಂಜಯ ಅಡ್ಪಂಗಾಯ, ಡಾ. ರಾಜರಾಂ, ಮಮತಾ ಗಟ್ಟಿ, ಸತೀಶ್ ಕೆದಿಂಜೆ, ದಿವ್ಯ ಪ್ರಭಾ, ಕೃಪಾ ಅಮರ್ ಆಳ್ವ, ಕೌಶಲ್ ಪ್ರಸಾದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಇವರ ಹೆಸರುಗಳು ಇದ್ದವು. ಆದರೆ ಅಶೋಕ್ ರೈ ಕೂಡಾ ಅರ್ಜಿ ಸಲ್ಲಿಸಿದ್ದರು, ಕೆಪಿಸಿಸಿ ಅವರ ಹೆಸರನ್ನು ಗೌಪ್ಯವಾಗಿಟ್ಟಿತ್ತು ಅನ್ನೋ ಮಾಹಿತಿಯೂ ಇದೆ. ಇನ್ನೊಂದೆಡೆ ಅರ್ಜಿ ಸಲ್ಲಿಸದವರಿಗೂ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದರು.
ಕೆಪಿಸಿಸಿ
ಸಮಿತಿ ಮುಂದೆ ರೈ ಹಾಜರ್!
ದ.ಕ. ಜಿಲ್ಲಾ ಕಾಂಗ್ರೆಸ್
ಕಚೇರಿಯಲ್ಲಿ ಡಿಸೆಂಬರ್ 26ರಂದು ಪಕ್ಷದ ಉಸ್ತುವಾರಿ ನಾಯಕರು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ವೇಳೆ ರೈ ಎಸ್ಟೇಟ್ ಎಜುಕೇಶನ್
ಮತ್ತು ಚಾರಿಟಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಹಾಜರಾಗಿ ಅಭಿಪ್ರಾಯ
ತಿಳಿಸಿದ್ದಾರೆ. ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ,
ಉದ್ಯಮಿ, ವಿವಿಧ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಗಳ ರೂವಾರಿ ಆಗಿರುವ ಇವರು ದ.ಕ.ಜಿಲ್ಲಾ
ಬಿಜೆಪಿಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಅಶೋಕ್ ರೈ ಅವರು ಬಿಜೆಪಿಗೆ
ಬೈ ಹೇಳಿ ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ
ಸುದ್ದಿ ಹರಿದಾಡಿತ್ತು. ಪುತ್ತೂರು ವಿಧಾನಸಭಾದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಲವಾರು ಬಾರಿ ಪ್ರಯತ್ನ ಪಟ್ಟಿದ್ದರು. ಈ ಬಾರಿಯೂ ಆ
ಅವಕಾಶ ಸಿಗುವುದು ಬಹುತೇಕ ಕಡಿಮೆ. ಈ ಹಿನ್ನೆಲೆಯಲ್ಲಿ ಅವರ
ಅಭಿಮಾನಿಗಳು ನೇರವಾಗಿ ಕೆಪಿಸಿಸಿ ನಾಯಕರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ನಾಯಕರೂ ಕೂಡ ಅಶೋಕ್ ರೈ ಅವರೊಂದಿಗೆ ಮಾತುಕತೆ
ನಡೆಸಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.
ಸಮಿತಿ ಮುಂದೆ
ಗೆಲ್ಲುವ ವಿಶ್ವಾಸ!
ಅಶೋಕ್ ರೈ ಅವರ ಹೆಸರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದೆ ಎಂಬ ಕಾರಣಕ್ಕೆ ಪಕ್ಷದ ಪ್ರಮುಖರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕರೆದು ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಗೆ ಹಾಜರಾಗಿರುವ ಅಶೋಕ್ ರೈ ಅವರು, ‘‘ಪಕ್ಷ ನನಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಖಂಡಿತವಾಗಿಯೂ ಗೆಲುವು ಖಚಿತ‘‘ ಎಂದು ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದಿದೆ.
ರೈ ಗೆದ್ದರೆ
ಕಮಲ ಆಪರೇಷನ್!
ಇನ್ನೊಂದೆಡೆ
ಸಂಘ ಪರಿವಾರ, ಬಿಜೆಪಿ ಸದಸ್ಯರೂ ಆಗಿರುವ ಅಶೋಕ್ ರೈ ಕಾಂಗ್ರೆಸ್ ನಿಂದ ಟಿಕೆಟ್ ಖಚಿತವಾದರಷ್ಟೇ ಕಾಂಗ್ರೆಸ್
ಸೇರುವುದಾಗಿ ತಿಳಿದು ಬಂದಿದೆ. ಈಗಾಗಲೇ ಅಶೋಕ್ ರೈ ಗೆ ಟಿಕೆಟ್ ನೀಡುವುದಕ್ಕೆ ಭಾರೀ ಸಂಖ್ಯೆಯಲ್ಲಿ
ಕಾವು ಹೇಮನಾಥ ಶೆಟ್ಟಿ ಪರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿ ಸಭೆಯನ್ನೂ ಮಾಡಿದ್ದಾರೆ. ಮಾತ್ರವಲ್ಲದೇ,
ಅಶೋಕ್ ರೈ ‘ಕೈ‘ ಚಿಹ್ನೆಯಿಂದ ಗೆದ್ದಲ್ಲಿ ‘ಕಮಲ ಆಪರೇಷನ್‘ ಗೆ ಒಳಗಾಗುವ ಮೊದಲ ವ್ಯಕ್ತಿಯಾಗಲಿದ್ದಾರೆ
ಅನ್ನೋ ಮಾತು ಕೂಡಾ ಅಂದಿನ ಆ ಸಭೆಯಲ್ಲಿ ಕೇಳಿ ಬಂದಿತ್ತು.