VITTLA: ಯುವತಿಯ ಬರುವಿಕೆಗೆ ಕಾದು ಕುಳಿತ ಕುಟುಂಬ...!!!
Thursday, November 10, 2022
ವಿಟ್ಲ: ಇಂಟರ್‌ವ್ಯೂವ್ ಗೆಂದು ಮನೆಯಿಂದ ಹೊರಟ ಯುವತಿ ಕಾಣೆಯಾಗಿರುವ ಘಟನೆ ಬಂಟ್ವಾಳದ ಕಂಬಳಬೆಟ್ಟುವಿನಲ್ಲಿ ನಡೆದಿದೆ. ಯುವತಿಯ ನಾಪತ್ತೆಯಿಂದಾಗಿ ಕಂಗಾಲಾಗಿರುವ ಕುಟುಂಬವು ಮಗಳ ಬರುವಿಕೆಯನ್ನ ಎದುರು ನೋಡುತ್ತಿದೆ.
ಕಂಬಳಬೆಟ್ಟು ನಿವಾಸಿ ದಿ.ಆನಂದ ಅವರ ಪುತ್ರಿ ಸುಶ್ಮಿತಾ(21) ಎಂಬವರು ನಾಪತ್ತೆಯಾಗಿರುವ ಯುವತಿ. ಇಂಟರ್‌ವ್ಯೂವ್ ಇದೆ ಎಂದು ಮನೆಯಿಂದ ಹೊರಟಿದ್ದಾರೆ. ಆದ್ರೆ ಮತ್ತೆ ಮನೆಗೆ ಹಿಂದಿರುಗದೆ ಇರುವುದರಿಂದ ಆತಂಕದಲ್ಲಿದ್ದಾರೆ. ಈ ಬಗ್ಗೆ ಮನೆಯವರು ವಿಟ್ಲ ಠಾಣೆಗೆ ದೂರು ನೀಡಿದ್ದು, ಯುವತಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.