ಅಜ್ಞಾತವಾಸಕ್ಕೆ ತೆರಳಿರುವ ನಳಿನ್ ಕುಮಾರ್ ಸುಳ್ಳಿನ ರಾಜಕಾರಣ: ಅಭಯಚಂದ್ರ ಜೈನ್
ಮಂಗಳೂರು: ಟೋಲ್ ಗೇಟ್ ತೆರವುಗೊಳಿಸುವ ಬದಲಿಗೆ ಸಂಸದರು ಅಜ್ಞಾತವಾಸಕ್ಕೆ ತೆರಳಿದ್ದಾರೆ. ಹಗಲು ರಾತ್ರಿ ಧರಣಿ ಕೂತಿರುವ ಪ್ರತಿಭಟನಾಕಾರ, ಟೋಲ್ ತೆರವಿಗೆ ಆಗ್ರಹಿಸುತ್ತಿರುವ ಜನರ ಬೇಡಿಕೆ ಈಡೇರಿಸುವ ಬದಲಿಗೆ ಭಂಡತನ ಪ್ರದರ್ಶಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಸರಣಿ ಸುಳ್ಳುಗಳ ರಾಜಕಾರಣಕ್ಕೆ ಟೋಲ್ ತೆರವು ಹೋರಾಟ ಅಂತ್ಯ ಹಾಡಲಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ಟೋಲ್ ತೆರವು ಆಗ್ರಹಿಸಿ ಸುರತ್ಕಲ್ NITK ಟೋಲ್ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
"ಟೋಲ್ ತೆರವು ಹೋರಾಟ ವಚನ ಭ್ರಷ್ಟ ಬಿಜೆಪಿಯನ್ನು ಜಿಲ್ಲೆಯಲ್ಲಿ ಗುಡಿಸಿ ಹಾಕುವುದು ಖಂಡಿತ. ಟೋಲ್ ಗೇಟ್ ಮುಚ್ಚದೆ ಧರಣಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೋಹನ್ ಕೋಟ್ಯಾನ್ ಮುಲ್ಕಿ, ವಸಂತ ಬರ್ನಾಡ್, ಹಸನಬ್ಬ ಮಂಗಳಪೇಟೆ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಶ್ರೀನಾಥ್ ಕುಲಾಲ್, ತಯ್ಯೂಬ್ ಬೆಂಗ್ರೆ, ಸಾದಿಕ್ ಕಣ್ಣೂರು, ಪ್ರಮೀಳಾ ಶಕ್ತಿನಗರ, ಸುಭಾಶ್ಚಂದ್ರ ಶೆಟ್ಟಿ, ಸಂತೋಷ್ ಕುಮಾರ್ ರೈ ಬೆಳ್ತಂಗಡಿ, ಜಗದೀಶ್ ಕೊಯ್ಲ, ರಾಘವೇಂದ್ರ ರಾವ್, ಮುಹಮ್ಮದ್ ಕುಂಜತ್ತಬೈಲ್, ಬಶೀರ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.