UDUPI: ವಿದ್ಯಾರ್ಥಿನಿಗೆ ಬಾಸುಂಡೆ ಬೀಳುವಂತೆ ಹೊಡೆದು ಅಮಾನವೀಯ ಕೃತ್ಯ!!
Monday, November 28, 2022
ಉಡುಪಿ: ಉಡುಪಿ ಜಿಲ್ಲೆಗೆ ಶಾಲಾ ಪ್ರವಾಸಕ್ಕೆ ಕರೆದುಕೊಂಡು ಬಂದು ಮಕ್ಕಳಿಗೆ ಹೊಡೆಯುತ್ತಿದ್ದ ಶಿಕ್ಷಕನ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಪ್ರವಾಸಕ್ಕೆ ಉಡುಪಿ ಜಿಲ್ಲೆಯ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಚಿತ್ರದುರ್ಗ ಮೂಲದ ಶಾಲೆಯ ಮಕ್ಕಳನ್ನು ಕರೆದುಕೊಂಡು ಬರಲಾಗಿತ್ತು. ದೇವಸ್ಥಾನ ನೋಡಿ ದರ್ಶನ ಪಡೆದ ಬಳಿಕ ಬಸ್ ಹತ್ತಲು ಶಿಕ್ಷಕರು ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಬಸ್ ಹತ್ತಲು ಸ್ವಲ್ಪ ತಡವಾಯಿತು ಎಂದು ಕಿಡಿಕಾರಿದ ಶಿಕ್ಷಕ ವಿದ್ಯಾರ್ಥಿನಿಯರಿಗೆ ಬೆತ್ತದಿಂದ ಹೊಡೆದಿದ್ದು, ಛಡಿ ಬೀಳುವಂತೆ ಬಾರಿಸಿದ್ದಾನೆ. ಈ ಅಮಾನವೀಯ ಕೃತ್ಯವನ್ನ ಕಂಡ ಪ್ರವಾಸಿಗರು ಶಿಕ್ಷಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಶಿಕ್ಷಕ ಪ್ರವಾಸಿಗರಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ.
ಇದನ್ನ ಅಲ್ಲಿನ ಓರ್ವ ಪ್ರವಾಸಿಗ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇಂಥಹ ಶಿಕ್ಷಕನನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ದಾನೆ.
