Mangaluru: ಕುಕ್ಕರ್ ಬಾಂಬ್ ಆರೋಪಿ ಶಾರೀಕ್ ಪರ ವಕಾಲತ್ತು ಮಾಡದಂತೆ ವಕೀಲರಿಗೆ VHP ಆಗ್ರಹ
Monday, November 28, 2022
ಮಂಗಳೂರು:
ಆಟೊ ರಿಕ್ಷಾ ಬಾಂಬ್ ಸ್ಫೋಟ ಹಿನ್ನೆಲೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ದುರ್ಗಾ ವಾಹಿನಿ ವತಿಯಿಂದ
ಜನಜಾಗೃತಿ ಅಭಿಯಾನ ಮಂಗಳೂರು ನಗರ ಹಾಗೂ ನಗರದ ಹೊರವಲಯದ ಪ್ರದೇಶಗಳಲ್ಲಿ ನಡೆಯಿತು.
ಮಂಗಳೂರಿನ
ಜ್ಯೋತಿ ವೃತ್ತ, ಉರ್ವಸ್ಟೋರ್, ಕಾವೂರು, ಮೂಡಬಿದ್ರೆ, ತೊಕ್ಕೊಟ್ಟು, ಗುರುಪುರ ಕೈಕಂಬ, ಸುರತ್ಕಲ್ ನಲ್ಲಿ ಅಭಿಯಾನ ನಡೆಯಿತು.
ಇಸ್ಲಾಮಿಕ್
ಭಯೋತ್ಪಾದನೆ ವಿರುದ್ದ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಮಂಗಳೂರಿನ ಜ್ಯೋತಿ ಬಳಿ ನಡೆದ
ಅಭಿಯಾನದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮಾತನಾಡಿ, ಭಯೋತ್ಪಾದಕರು ಹಲವು ಹಿಂದೂ
ದೇಗುಲಗಳನ್ನು ಸ್ಫೋಟಿಸುವ ಸಂಚು ಹೂಡಿದ್ದರು ಎಂದು ತಿಳಿದು ಬಂದಿದೆ. ಅಂತಹ ಸಂಚನ್ನ ವಿಫಲಗೊಳಿಸಲು
ವಿಶ್ವ ಹಿಂದೂ ಪರಿಷತ್ ದೇಗುಲದ ಪರ ನಿಲ್ಲಲಿದೆ. ಕುಕ್ಕರ್ ಸ್ಫೋಟದಲ್ಲಿ ಗಾಯಾಳಾಗಿರುವ ಆರೋಪಿ ಶಾರಿಕ್
ನ ಪರ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಆಗ್ರಹಿಸಿದ್ದಾರೆ.
ವೀಡಿಯೋ ವೀಕ್ಷಿಸಿ