SULYA: ಸಚಿವ ಎಸ್.ಅಂಗಾರಗೆ ಡೆಂಗ್ಯೂ ಜ್ವರ...
Monday, November 28, 2022
ಸುಳ್ಯ: ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಅವರಿಗೆ ಡೆಂಗ್ಯೂ ಜ್ವರ ಧೃಢಪಟ್ಟಿದೆ. ನಿನ್ನೆ ಮಧ್ಯಾಹ್ನ ಕೆವಿಜೆ ಆಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷೆ ನಡೆಸಿದಾಗ ಸಚಿವರಿಗೆ ಡೆಂಗ್ಯೂ ಜ್ವರ ಇರೋದನ್ನ ವೈದ್ಯರು ಖಚಿತಪಡಿಸಿದ್ದಾರೆ.
ಹಾಗಾಗಿ ಸಚಿವರು ಇನ್ನೆರಡು ದಿನ ಸಾರ್ವಜನಿಕ ಸಂಪರ್ಕಕ್ಕೆ ಲಭ್ಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಸಚಿವರಿಗೆ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದೆ.