KARKALA: ಕಾರ್ಕಳ ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್!?
Monday, November 28, 2022
ಕಾರ್ಕಳ: ಇನ್ನೇನು ಕೆಲ ತಿಂಗಳಲ್ಲೇ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಹಾಗಿರುವಾಗ್ಲೇ ರಾಜಕೀಯ ರಣಕಣ ಗರಿಗೆದರಿದೆ. ಹೌದು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಟ್ಟರ್ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಅಖಾಡಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ಹೆಬ್ರಿಯಲ್ಲಿ ನಿನ್ನೆ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಈ ನಿರ್ಣಯವನ್ನು ಪ್ರಕಟಿಸಿದ್ದಾರೆ. ಹಾಗಾದ್ರೆ ಈ ಬಾರಿ ಸಚಿವ ಸುನೀಲ್ ಕುಮಾರ್ ಅವರಿಗೆ ಪ್ರಬಲ ಪೈಪೋಟಿಯಾಗಿ ಪ್ರಮೋದ್ ಮುತಾಲಿಕ್ ಅವ್ರೇ ಎದುರಾಗ್ತಾರ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಯಾಕಂದ್ರೆ ಸೋಲಿಲ್ಲದ ಸರದಾರ ಸಚಿವ ಸುನೀಲ್ ಕುಮಾರ್, ಹೀಗಿರುವಾಗ ಪ್ರಮೋದ್ ಮುತಾಲಿಕ್ ಯಾಕೆ ಕಾರ್ಕಳದಿಂದ್ಲೇ ಕಣಕ್ಕಿಳಿಯುವುದು ಅನ್ನೋದು ಒಂದು ಯಕ್ಷಪ್ರಶ್ನೆಯಾಗಿದೆ. ಅದಲ್ಲದೆ ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ ಮಾಡಿ ಹಿಂದುತ್ವದ ಮತವನ್ನ ಹಾಳು ಮಾಡುತ್ತಾರಾ ಅನ್ನೋದು ಇನ್ನೊಂದು ಪ್ರಶ್ನೆಯಾಗಿದೆ.