NITK Tollgate: ಸ್ಮಶಾನ ಸೇರಿದ ಬಿಜೆಪಿ ಅಭಿನಂದನಾ ಫ್ಲೆಕ್ಸ್; ಮುನೀರ್ ಕಾಟಿಪಳ್ಳ ವ್ಯಂಗ್ಯ
Monday, November 28, 2022
ಮಂಗಳೂರು:
ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ರದ್ದು ಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್
ಕುಮಾರ್ ಕಟೀಲ್ ಮಾಹಿತಿ ನೀಡಿದ ಬಳಿಕ, ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್
ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಲು ಹಲವು ಫ್ಲೆಕ್ಸ್ ಗಳು ಪ್ರಿಂಟ್ ಆಗಿದ್ದವು ಅನ್ನೋದು ಗೊತ್ತಾಗಿದೆ.
ವಿಪರ್ಯಾಸವೆಂದರೆ, ನಗರದಲ್ಲಿ ರಾರಾಜಿಸಬೇಕಿದ್ದ ಫ್ಲೆಕ್ಸ್ ಗಳು ಈಗ ಸುರತ್ಕಲ್ ಸ್ಮಶಾನದ ಆವರಣದಲ್ಲಿದೆ ಎಂದು ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ಧಾರೆ. ‘‘ಹೆಜಮಾಡಿ ಟೋಲ್ ನೊಂದಿಗೆ ಸುಂಕ ವಸೂಲಿ ವಿಲೀನ ಮಾಡಿದ್ದರಿಂದ ಕಕ್ಕಾಬಿಕ್ಕಿಯಾದ ಬಿಜೆಪಿಯು, ಇದೀಗ ಅಭಿನಂದನಾ ಫ್ಲೆಕ್ಸ್ ಗಳನ್ನು ಸ್ಮಶಾನದಲ್ಲಿ ಅಡಗಿಸಿಟ್ಟಿದೆ. ಒಟ್ಟು ಸ್ಮಶಾನ ಸೇರಬೇಕಾದದ್ದು ಸ್ಮಶಾನಕ್ಕೆ ಸೇರುತ್ತಿರುವುದು ಜನರಿಗೆ ಸಮಾಧಾನ ತಂದಿದೆ ಎಂದು ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ.