
Manipal: ‘ಮುಸ್ಲಿಮರು ಟೆರರಿಸ್ಟ್‘ ಎಂದ ಪ್ರೊಫೆಸರ್; ವಿದ್ಯಾರ್ಥಿಯಿಂದ ಆಕ್ಷೇಪ | ವೀಡಿಯೋ ವೈರಲ್
ಉಡುಪಿ: ತರಗತಿ ನಡೆಸುವ ವೇಳೆ ಪ್ರಾಧ್ಯಾಪಕರೋರ್ವರು ಮುಸ್ಲಿಮರ ಕುರಿತು
ಟೆರರಿಸ್ಟ್ ಎಂದಿರುವುದನ್ನು ವಿದ್ಯಾರ್ಥಿಯೋರ್ವ ಆಕ್ಷೇಪಿಸಿರುವ ಘಟನೆ ಉಡುಪಿಯ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ
ಎಂಐಟಿ ಕಾಲೇಜಿನಲ್ಲಿ ನಡೆದಿದೆ.
ತರಗತಿ ನಡೆಯುತ್ತಿದ್ದ ವೇಳೆ ಪ್ರೊಫೆಸರ್ ಅನಗತ್ಯವಾಗಿ ಧಾರ್ಮಿಕ ನಿಂದನೆ
ಮಾಡಿದ್ಧಾರೆ ಎನ್ನಲಾಗಿದೆ. ಈ ಸಂದರ್ಭ ತರಗತಿಯಲ್ಲಿದ್ದ ವಿದ್ಯಾರ್ಥಿಯೋರ್ವ ಪ್ರೊಫೆಸರ್ ಹೇಳಿಕೆಗೆ
ಆಕ್ಷೇಪವೆತ್ತಿದ್ದಾನೆ. ಎಲ್ಲ ವಿದ್ಯಾರ್ಥಿಗಳ ಮುಂದೆ ಹೀಗೆ ಹೇಳಿದಕ್ಕಾಗಿ ಪ್ರೊಫೆಸರ್ ಅವರನ್ನು ತರಾಟೆಗೆ
ತೆಗೆದುಕೊಂಡಿದ್ದಾನೆ. ತರಗತಿಯಲ್ಲಿದ್ದ ಆತನ ಸ್ನೇಹಿತರು ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು,
ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಸಾರಿ ಕೇಳಿದ್ದ
ಪ್ರೊಫೆಸರ್
ತನ್ನ ಹೇಳಿಕೆಗೆ ವಿದ್ಯಾರ್ಥಿಯಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪ್ರೊಫೆಸರ್ ಇದನ್ನು ತಾನು ತಮಾಷೆಗಾಗಿ ಹೇಳಿದ್ಧಾಗಿ ತಿಳಿಸಿದ್ದಾರೆ. ಅಲ್ಲದೇ, ಕ್ಷಮೆ ಕೇಳಿರುವುದು ಕೂಡಾ ವೀಡಿಯೋದಲ್ಲಿ ಸೆರೆಯಾಗಿದೆ. ಆದರೆ, ವಿದ್ಯಾರ್ಥಿ ‘‘ಕ್ಷಮೆ ಕೇಳಿದ ಮಾತ್ರಕ್ಕೆ ಮುಗಿದು ಹೋಗುತ್ತ? ಇಷ್ಟು ಜನರ ಮುಂದೆ ನಿಂದಿಸುವುದು ಸರಿನಾ?‘‘ ಅಂತಾ ಪ್ರಶ್ನಿಸಿದ್ದಾನೆ.
ಪ್ರೊಫೆಸರ್
ವಿರುದ್ಧ ಕ್ರಮ
ನವೆಂಬರ್ 26 ರಂದು ನಡೆದಿದೆ ಎನ್ನಲಾದ ಘಟನೆಯ ವೀಡಿಯೋ ವೈರಲ್ ಆಗಿದ್ದು,
ತಮ್ಮ ಗಮನಕ್ಕೆ ಬರುತ್ತಿದ್ದಂತೆ ಮಾಹೆ ವಿವಿ ಪ್ರೊಫೆಸರ್ ಅವರನ್ನು ಅಮಾನತು ಮಾಡಿ ಆಂತರಿಕ ತನಿಖೆಗೆ
ನಿರ್ಧರಿಸಿದೆ. ಅಲ್ಲದೇ ಕೌನ್ಸೆಲಿಂಗ್ ನಡೆಸುವ ಮೂಲಕ ವಿದ್ಯಾರ್ಥಿಗೆ ಸಾಂತ್ವನ ಹೇಳಿದ್ದಾಗಿ ತಿಳಿದು
ಬಂದಿದೆ.
ವೀಡಿಯೋ ವೀಕ್ಷಿಸಿ