ರಾಜ್ಯದಲ್ಲಿ ತಲೆ ಎತ್ತಲಿದೆ ಮುಸ್ಲಿಂ ಹೆಣ್ಮಕ್ಕಳ ಕಾಲೇಜು; ಸರ್ಕಾರದ್ದೇ ನೇತೃತ್ವ, ಸಿಎಂ ಅವರಿಂದಲೇ ಚಾಲನೆ!?
ಬೆಂಗಳೂರು:
ಹಿಜಾಬ್ ಸಂಘರ್ಷದ ಬಳಿಕ ಮೊಟಕುಗೊಂಡಿದ್ದ ಮುಸ್ಲಿಂ ಹೆಣ್ಮಕ್ಕಳ ಶೈಕ್ಷಣಿಕ ಬದುಕು ಮತ್ತೆ ಹಳಿಗೆ ತರುವ
ನಿಟ್ಟಿನಲ್ಲಿ ರಾಜ್ಯ ವಕ್ಫ್ ಬೋರ್ಡ್ ಪ್ರತ್ಯೇಕ 10 ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜು ಸ್ಥಾಪನೆಗೆ
ನೀಲನಕ್ಷೆ ಸಿದ್ಧಪಡಿಸಿದೆ. ಇದಕ್ಕೆ ಬೇಕಾದ ತಯಾರಿಗಳು ನಡೆದಿದ್ದು, ಮುಂದಿನ ತಿಂಗಳು ಸ್ವತಃ ಸಿಎಂ
ಬಸವರಾಜ ಬೊಮ್ಮಾಯಿ ಅವರೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ರಾಜ್ಯಾದ್ಯಂತ
ಹಲವು ಕಡೆಗಳಿಂದ ನೂತನ ಕಾಲೇಜು ಆರಂಭಿಸಲು ಅನುಮತಿ ಕೇಳಿ ಸರಕಾರಕ್ಕೆ ಮುಸ್ಲಿಂ ಉದ್ಯಮಿಗಳು, ಸಂಘ
ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ 2 ಕಾಲೇಜುಗಳಿಗೆ ಅನುಮತಿ ದೊರೆತಿದೆ. ಅದರಲ್ಲಿ ಒಂದು
ಮಂಗಳೂರು ನಗರದಲ್ಲಿ ಸ್ಥಾಪನೆ ಆಗಲಿದೆ ಅನ್ನೋ ಮಾತು ಕೇಳಿ ಬರತ್ತಿದೆ.
ಈ ಮಧ್ಯೆ ರಾಜ್ಯ
ಸರಕಾರವೇ ವಕ್ಫ್ ಬೋರ್ಡ್ ಮೂಲಕ ಹತ್ತು ಪ್ರತ್ಯೇಕ ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜು ಸ್ಥಾಪನೆಗೆ ಬೆಂಬಲಿಸಿದೆ.
ಅಲ್ಲದೇ, ಪ್ರತಿ ಕಾಲೇಜಿಗೂ ಅನುದಾನ ಒದಗಿಸಲು ಮುಂದಾಗಿದೆ. 2024ರ ವೇಳೆಗೆ ಈ ಕಾಲೇಜು ತರಗತಿಗಳು
ಪ್ರಥಮ ಪಿಯುಸಿಯಿಂದ ಆರಂಭವಾಗಿ ಪದವಿ ವರೆಗೆ ಮುಂದುವರೆಸುವ ಇರಾದೆ ಹೊಂದಲಾಗಿದೆ.
ಸರಕಾರದ ಈ
ನಿರ್ಧಾರದಿಂದ ಹಿಜಾಬ್ ಕಾರಣಕ್ಕಾಗಿ ಶಿಕ್ಷಣ ಕಳೆದುಕೊಂಡ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅನುಕೂಲವಾದರೆ,
ಸರಕಾರದ ಈ ನಿರ್ಧಾರ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಜಾಸ್ತಿ ಇದೆ.