-->
‘ಕಾಂತಾರ‘ ಬಳಿಕ ಕುತೂಹಲ ಹುಟ್ಟು ಹಾಕಿದ ‘ಇನಾಮ್ದಾರ್‘

‘ಕಾಂತಾರ‘ ಬಳಿಕ ಕುತೂಹಲ ಹುಟ್ಟು ಹಾಕಿದ ‘ಇನಾಮ್ದಾರ್‘

 


ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ‘ಕಾಂತಾರ‘ ಸಿನೆಮಾ ಬಳಿಕ ಇದೀಗ ಕರಾವಳಿಯಲ್ಲಿ ಗಾಂಧಿನಗರ ತಯಾರಾಗುತ್ತಿದೆ ಅನ್ನೋ ಮಾತಿಗೆ ಪೂರಕ ಎನ್ನುವಂತೆ ಮತ್ತೊಂದು ಸಿನೆಮಾ ಸೆಟ್ಟೇರಿದೆ. ವಿಶೇಷ ಅಂದರೆ ಕಾಂತಾರ ಸಿನೆಮಾ ನಿರ್ದೇಶಕ ರಿಷಬ್ ಶೆಟ್ಟಿ ತವರಾದ ಕುಂದಾಪುರ ಮೂಲದವರೇ ಆದ ‘ಕತ್ತಲೆಕೋಣೆ‘ ಸಿನೆಮಾ ಖ್ಯಾತಿಯ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಈ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಇನಾಮ್ದಾರ್ ‘ ಅನ್ನೋ ಟೈಟಲ್ ನಡಿ ರಿಲೀಸ್ ಆಗಲಿರುವ ಈ ಸಿನೆಮಾದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ಕೆಲವರಂತೂ ಇದು ಕಾಂತಾರ 2 ಎಂದೇ ಕರೆದಿದ್ದಾರೆ. ಸಂದೇಶ್ ಶೆಟ್ಟಿ ಅಜ್ರಿ ಈ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಜೊತೆಗೆ ಕಥೆ ಒದಗಿಸಿದ್ದಾರೆ.

ಸಿನೆಮಾದ ಟೀಸರ್ ಮೇಲ್ನೋಟಕ್ಕೆ ಕಾಂತಾರದಂತೆ ಹಳ್ಳಿ ಸೊಗಡಿನ ಸಿನೆಮಾ ಅನ್ನೋದನ್ನ ಗೊತ್ತುಪಡಿಸಿದೆ. ಕರಾವಳಿಯ ಗಂಡುಕಲೆ ಯಕ್ಷಗಾನ ಮೇಳೈಸಿದಂತೆ ಕಾಣುತ್ತಿದ್ದು, ಕುಂದಾಪುರ ಕನ್ನಡ ಭಾಷೆಯೂ ಇದ್ದು ಹೆಚ್ಚು ಕುತೂಹಲ ಹುಟ್ಟು ಹಾಕಿದೆ. ಅಲ್ಲದೇ, ಕಾಂತಾರ ಮಾದರಿಯಲ್ಲೇ ‘ಇನಾಮ್ದಾರ್‘ ಟೀಸರ್ ಕೂಡಾ ಬಿಂಬಿತವಾಗಿದ್ದು ನಿರೀಕ್ಷೆ ಹೆಚ್ಚಿಸಿದೆ. ಕಾಂತಾರ ಸಿನೆಮಾ ಒಂದು ದಂತ ಕಥೆಯಾದರೆ, ‘ಇನಾಮ್ದಾರ್’ ಕಪ್ಪು ಸುಂದರಿಯ ಸುತ್ತ ಅನ್ನೋ ಟ್ಯಾಗ್ ಲೈನ್ ಹೊಂದಿದೆ. ಸಿನೆಮಾವು ಯಾವುದೋ ಹಳೆ ಕಾಲದ ಕಥೆ ಜೊತೆಗೆ ತಳುಕು ಹಾಕಿಕೊಂಡಿದೆ ಅನ್ನೋದು ಟೀಸರ್ ನಲ್ಲಿ ಸ್ಪಷ್ಟವಾಗಿದೆ.




ಶ್ರೀಕುಂತಿಯಮ್ಮ ಪ್ರೊಡಕ್ಷನ್ ಬ್ಯಾನರ್ ನಡಿ ಸೆಟ್ಟೇರಿದ ಸಿನೆಮಾಕ್ಕೆ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದಾರೆ. ಸಿನೆಮಾದಲ್ಲಿ ಖ್ಯಾತ ನಟರಾದ ಅವಿನಾಶ್, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ರಘು ಪಾಂಡೇಶ್ವರ, ಎಂ.ಕೆ. ಮಠ, ಎಸ್ತರ್ ನೊರೊನ್ಹಾ ಇಂತಹ ದೊಡ್ಡ ಕಲಾವಿದರ ತಾರಾಗಣವಿದೆ. ನಾಯಕನಾಗಿ ಹೊಸ ಮುಖ ರಂಜನ್ ಛತ್ರಪತಿ ಕಾಣಸಿಕೊಂಡರೆ, ಕರಾವಳಿ ಬೆಡಗಿ ಚಿರಶ್ರೀ ಅಂಚನ್ ನಾಯಕಿಯಾಗಿ ನಟಿಸಿದ್ದಾರೆ.

ಸಿನೆಮಾಕ್ಕೆ ಥ್ರಿಲ್ಲರ್ ಮಂಜು ಸಾಹಸವಿದ್ದು, ಎನ್. ಮುರುಳೀಧರ್ ಕ್ಯಾಮೆರಾ ಕೈಚಳಕವಿದೆ. ರಾಕಿ ಸೋನು ಸಂಗೀತದ ಅಬ್ಬರವನ್ನು ಟೀಸರ್ ನಲ್ಲಿ ಗಮನಿಸಬಹುದಾಗಿದೆ.

ಒಟ್ಟಿನಲ್ಲಿ ‘ಕಾಂತಾರ‘ ಸಿನೆಮಾ ಬಳಿಕ ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದ ‘ಇನಾಮ್ದಾರ್‘ ಕುತೂಹಲ ಹೆಚ್ಚಿಸಿದೆ.


ಫಿಲ್ಮ್ ಬ್ಯೂರೋ, TNH


ಸಿನೆಮಾ ಟೀಸರ್ ವೀಕ್ಷಿಸಿ




Ads on article

Advertise in articles 1

advertising articles 2

Advertise under the article