Udupi: ರೈಲು ಹಳಿಯಲ್ಲಿ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!
ಉಡುಪಿ: ರೈಲು ಹಳಿಯಲ್ಲಿ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನೋರ್ವನ
ಮೃತದೇಹ ಪಡುಬಿದ್ರಿಯ ಪಾದಬೆಟ್ಟು ಎಂಬಲ್ಲಿ ಪತ್ತೆಯಾಗಿದೆ.
ರಾತ್ರಿ 9.30 ರ ಸುಮಾರಿಗೆ ರೈಲು ಹಾದುಹೋದ ಬಳಿಕ ಪಾದಬೆಟ್ಟು ರೈಲು
ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿ
ಪ್ರಕಾರ 40 ರ ಆಸುಪಾಸಿನ ವ್ಯಕ್ತಿಯು ಸ್ಥಳೀಯ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಆದರೆ, ಮೃತನ ಗುರುತು
ಇನ್ನಷ್ಟೇ ನಿಖರವಾಗಿ ತಿಳಿದು ಬರಬೇಕಿದೆ. ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಪಡುಬಿದ್ರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.jpeg)
ಬೇರ್ಪಟ್ಟ ರುಂಡ ಮುಂಡವನ್ನು ಶವಾಗಾರದಲ್ಲಿ ತಂದಿರಿಸಿದ ದಾವೂದ್ ಪಡುಬಿದ್ರಿ.
ಆಪತ್ಬಾಂಧವ
ತಂಡದಿಂದ ತೆರವು
ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾದ ಮಾಹಿತಿ ದೊರೆಯುತ್ತಲೇ ಪಡುಬಿದ್ರಿ
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಜೊತೆಗೆ ಆಪತ್ಬಾಂಧವ ಆಸಿಫ್ ಸಹೋದರ ದಾವೂದ್ ಪಡುಬಿದ್ರಿ ಹಾಗೂ
ಆಪತ್ಬಾಂಧವ ಆ್ಯಂಬುಲೆನ್ಸ್ ಚಾಲಕ ಅಥಾವುಲ್ಲ ಸೇರಿ ಮೃತದೇಹವನ್ನು ರೈಲು ಹಳಿಯಿಂದ ತೆರವುಗೊಳಿಸಿ ಆಪತ್ಬಾಂಧವ
ಆ್ಯಂಬುಲೆನ್ಸ್ ಮೂಲಕ ಶವಾಗಾರಕ್ಕೆ ರವಾನಿಸಿದರು. ಈ ಸಂದರ್ಭ ಪಡುಬಿದ್ರಿ ಪೊಲೀಸರು ಹಾಜರಿದ್ದರು.