MANGALORE: ಹಿಂದೂ ಯುವತಿಯನ್ನ ಮುಸ್ಲಿಂ ಧರ್ಮಕ್ಕೆ ಮತಾಂತರ ಯತ್ನ...!!!
ಮಂಗಳೂರು: ಹಿಂದೂ ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವಂತಹ ಆರೋಪದ ಮೇಲೆ ಮಂಗಳೂರಿನ ಪ್ರಸಿದ್ಧ ವೈದ್ಯೆ ಸೇರಿದಂತೆ ನಾಲ್ವರ ಮೇಲೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನ ಡಾ.ಜಮೀಲಾ, ಖಲೀಲ್, ಐಮನ್ ಹಾಗೂ ಇನ್ನೋರ್ವ ಮಹಿಳೆ ಎಂದು ಗುರುತಿಸಲಾಗಿದೆ.
ಹಿಂದು ಯುವತಿ ಬಿಲ್ಲವ ಸಮುದಾಯಕ್ಕೆ ಸೇರಿದವಲಾಗಿದ್ದು, ಬಿಕರ್ನಕಟ್ಟೆಯಲ್ಲಿ ಕೆಲಸಕ್ಕಿದ್ದಳು. ಈ ವೇಳೆ ಮೊಬೈಲ್ ಶಾಪ್ ನ ಮುಸ್ಲಿಂ ಯುವಕ ಖಲೀಲ್ ಎಂಬಾತನ ಪರಿಚಯವಾಗಿದೆ. ಬಳಿಕ ಹಿಂದು ಯುವತಿಯಲ್ಲಿ ಒಳ್ಳೆಯ ಸಂಬಳವಿರುವ ಕೆಲಸಕೊಡಿಸುವುದಾಗಿ ಖಲೀಲ್ ಆಕೆಯನ್ನ ಪುಸಲಾಯಿಸಿದ್ದಾನೆ. ಬಳಿಕ ಕಲ್ಲಾಪಿನಲ್ಲಿ ಮುಸ್ಲಿಂ ಮಹಿಳೆಯರನ್ನ ಪರಿಸಚಯಿಸಿದ್ದಾನೆ. ಬಳಿಕ ಕಲ್ಲಾಪಿನಲ್ಲಿರುವ ಮನೆಯವರಲ್ಲಿ ಹಿಂದು ಯುವತಿಗೆ ಕುರಾನ್ ಓದಲು, ನಮಾಝ್ ಮಾಡಲು ಕಲಿಸುವಂತೆ ಹೇಳಿ ಆ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಇನ್ನು ಆ ಮನೆಯ ಮಹಿಳೆಯರು ಒತ್ತಾಯಪೂರ್ವಕವಾಗಿ ನಮಾಝ್ ಮಾಡಿಸಿದ್ದಾರೆ. ಜೊತೆಗೆ ಖಲೀಲ್ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಅಂತ ಯುವತಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಇಷ್ಟೇ ಅಲ್ಲದೆ ಮುಂದುವರಿದ ಭಾಗವಾಗಿ ಯುವತಿಯ ಹೆಸರನ್ನ ಬದಲಾಯಿಸಿ ಕಾಸರಗೋಡಿನ ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಸಲಾಗಿತ್ತು. ಅಲ್ಲಿಂದ ಮತ್ತೆ ಆಸ್ಪತ್ರೆಯ ಮಾಲಕರ ಮನೆಯಲ್ಲಿ ಕೆಲಸಕ್ಕಿದ್ದಳು. ಈ ವೇಳೆ ಡಾ. ಸೈನಾಝ್ ಮತ್ತು ಡಾ. ಜಮೀಲಾ ಈಕೆಗೆ ಬುರ್ಖಾ ಧರಿಸಲು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.jpeg)


.jpeg)