UDUPI: ಕೊರವಡಿ ಕ್ರಾಸ್ ಬಳಿ ಕಾರಿಗೆ ಟ್ಯಾಂಕರ್ ಢಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು
Friday, November 18, 2022
ಕುಂಭಾಸಿ: ಕಾರಿಗೆ ಟ್ಯಾಂಕರ್ ಗುದ್ದಿದ ಘಟನೆ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರಿಗೆ ಹಿಂಭಾಗದಿಂದ ಬಂದ ಟ್ಯಾಂಕರ್ ಬಲವಾಗಿ ಡಿಕ್ಕಿಯಾಗಿದ್ದು ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಚಾಲಕ ಸಹಿತ ಇಬ್ಬರು ಮಹಿಳಾ ಪ್ರಯಾಣಿಕರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಎಥನಾಲ್ ತುಂಬಿದ್ದ ಟ್ಯಾಂಕರ್ ಅನ್ಲೋಡ್ ಸಲುವಾಗಿ ಕ್ಯಾಲಿಕಟ್ ನತ್ತ ಸಾಗುತ್ತಿತ್ತು.
ಟ್ಯಾಂಕರ್ ಹಾಗೂ ಕಾರು ಎರಡೂ ವಾಹನಗಳು ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದು, ಕೊರವಡಿ ಕ್ರಾಸ್ ಬಳಿ ಆಟೋ ರಿಕ್ಷಾವೊಂದು ಎದುರುಗಡೆಯಿಂದ (ಒನ್ ವೇ) ಬಂದಾಗ ಕಾರು ಚಾಲಕ ಬಲಭಾಗಕ್ಕೆ ಕಾರು ಚಲಾಯಿಸಿದ್ದು ಹಿಂಬದಿಯಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.