UDUPI: ರಸ್ತೆಯಲ್ಲೆ ಕಾಲೇಜು ವಿದ್ಯಾರ್ಥಿಗಳ ಮೋಜುಮಸ್ತಿ...!!!
Friday, November 18, 2022
ಮಣಿಪಾಲ: ಫೇರ್ ವೆಲ್ ಹೆಸರಿನಲ್ಲಿ ಸಾರ್ವಜನಿಕ ರಸ್ತೆಯಲ್ಲೆ ಮಣಿಪಾಲದ ಕಾಲೇಜಿನ ವಿದ್ಯಾರ್ಥಿಗಳು ಹುಚ್ಚಾಟ ಮೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಒಂದುಕಡೆ ಮಾಹೆ ವಿವಿಯ ಘಟಿಕೋತ್ಸವದ ಸಂಭ್ರಮ ನಡೆಯುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಫೇರ್ ವೆಲ್ ಹೆಸರಿನಲ್ಲಿ ವಿದ್ಯಾರ್ಥಿಗಳು ಸಖತ್ ಮೋಜು ಮಸ್ತಿ ಮಾಡುತ್ತಿದ್ದಾರೆ. ರಸ್ತೆಯಲ್ಲೇ ಮದ್ಯ ಸೇವಿಸಿ, ಪಟಾಕಿ ಸಿಡಿಸುವ ಮೂಲಕ ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದಾರೆ. ಇದರ ವಿಡಿಯೋ ತುಣುಕು ಇದೀಗ ವೈರಲ್ ಆಗುತ್ತಿದೆ.
ಮಣಿಪಾಲದ ಡಿ.ಸಿ ಆಫೀಸ್ ರಸ್ತೆಯಲ್ಲಿ ವಿದ್ಯಾರ್ಥಿಗಳು ಫೇರ್‌ವೆಲ್ ಪಾರ್ಟಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿ ಮಾಡಿ ಬೀದಿಯಲ್ಲಿ ಬೀಳ್ಕೊಡುಗೆ ನಡೆಸಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.