KASARAGODU: ಮದರಸ ವಿದ್ಯಾರ್ಥಿನಿಯನ್ನ ಎತ್ತಿ ನೆಲಕ್ಕೆ ಬಡಿದ ಕಿರಾತಕ...!!!
Friday, November 18, 2022
ಕಾಸರಗೋಡು: ಮದರಸಾ ವಿದ್ಯಾರ್ಥಿನಿಯನ್ನು ಎತ್ತಿ ನೆಲದ ಮೇಲೆ ಹೊಡೆದಿರುವ ಘಟನೆ ಮಂಜೇಶ್ವರ ಬಳಿ ಇಂದು ನಡೆದಿದೆ.
ಹೌದು ಮಂಜೇಶ್ವರಂನ ಮಂಗಲ್ಪಾಡಿ ಎಂಬಲ್ಲಿ ಈ ಘಟನೆ ಸಂಬಂಧ ಸಧ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮದರಸಾಕ್ಕೆ ಹೋಗುತ್ತಿದ್ದ ವೇಳೆ ಮಂಜೇಶ್ವರಂನ ಕುಂಜತ್ತೂರು ನಿವಾಸಿ ಅಬೂಬಕ್ಕರ್ ಸಿದ್ದಿಕಿ ವಿದ್ಯಾರ್ಥಿನಿಯನ್ನು ಎತ್ತಿ ನೆಲಕ್ಕೆ ಹೊಡೆದಿದ್ದಾನೆ.
ಇನ್ನು ಈ ಘಟನೆಯ ದೃಶ್ಯ ಮಂಜೇಶ್ವರಂನ ಉದ್ಯಾವರ ಸಾವಿರ ಜಮಾಅತ್ ಮಸೀದಿ ಬಳಿಯ ಸಿಸಿಟಿವಿ ಕ್ಯಾಮೆರಾದರಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿ ಮೇಲೆ ಮೇಲೆ ಹಲ್ಲೆ ನಡೆಸಿರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಸೈಕೋ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಈ ವ್ಯಕ್ತಿ ಮಾದಕವಸ್ತುಗಳನ್ನು ಬಳಸುತ್ತಿದ್ದನು ಮತ್ತು ಈ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
