Moodabidri: ಅಲ್ ಮಫಾಝ್ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಮರು ಕಲ್ಪಿಸುವಂತೆ ಹೈಕೋರ್ಟ್ ಆದೇಶ
Thursday, November 17, 2022
ಮೂಡಬಿದಿರೆ: ವಸತಿ ಕಟ್ಟಡದ ಅನುಮತಿ ಪಡೆದು ಮದರಸ ತೆರೆದ ಹಿನ್ನೆಲೆ ಕಡಿತಗೊಳಿಸಲಾಗಿದ್ದ ವಿದ್ಯುತ್ ಸಂಪರ್ಕ ಮರು ಕಲ್ಪಿಸುವಂತೆ ಮೆಸ್ಕಾಂ ಗೆ ಹೈಕೋರ್ಟ್ ಆದೇಶ ನೀಡಿದೆ.
ಇಲ್ಲಿನ ಪ್ರಾಂತ್ಯ ಗ್ರಾಮದ ಅಲ್ ಮಫಾಝ್ ಹೆಸರಿನ ವಸತಿ ಕಟ್ಟಡದಲ್ಲಿ ಮದ್ರಸ ತರಗತಿ ಆರಂಭಿಸಲಾಗಿತ್ತು. ಆದರೆ, ಪುರಸಭೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿತ್ತು. ಅಲ್ಲದೇ ಇದರ ವಿರುದ್ಧ ಪುರಸಭೆಗೆ ದೂರನ್ನು ನೀಡಿತ್ತು. ಪುರಸಭೆಯ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದು ನೋಟೀಸ್ ನೀಡಿ ವಿವರಣೆ ಕೇಳಲು ನಿರ್ಧರಿಸಲಾಗಿತ್ತು.
ಈ ಮಧ್ಯೆ ಪರವಾನಿಗೆ ರಹಿತ ಕಟ್ಟಡ ಅನ್ನೋ ದೂರಿನ ಮೇರೆಗೆ ಕಟ್ಟಡಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಕಡಿತಗೊಳಿಸಿತ್ತು. ಇದರ ವಿರುದ್ಧ ಅಲ್ ಮಫಾಝ್ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಕಡಿತಗೊಳಿಸಿದ ವಿದ್ಯುತ್ ಸಂಪರ್ಕ ಮರು ಕಲ್ಪಿಸುವಂತೆ ಆದೇಶವಿತ್ತಿದೆ.