PUTTUR: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಸಮರ್ಪಣಾ ಸೇವೆ...
Thursday, November 17, 2022
ಪುತ್ತೂರು: ಹತ್ತೂರು ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವ ದೋಷ ಪರಿಹಾರಾರ್ಥವಾಗಿ ನಾಳೆ(ನ.18) ರಂದು ಸಂಜೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಸಮರ್ಪಣಾ ಸೇವಾ ಕಾರ್ಯ ನಡೆಯಲಿದೆ.
ದೈವಸ್ಥಾನದಲ್ಲಿ ರಂಗಪೂಜೆ, ಸೀರೆ, ಚೆಂಡು ಮಲ್ಲಿಗೆ, ಎಳನೀರು, ಬೆಳ್ಳಿಯ ಕಲಶದಲ್ಲಿ ಸ್ವರ್ಣದ ತುಂಡು, ಬೆಳ್ಳಿಯ ತುಂಡು, ಬೆಳ್ತಿಗೆ ಅಕ್ಕಿ, ಬಳಿ ಹೂ, ರೂ.5ರ ಒಳಗಿನ ಚಲಾವಣೆಯಲ್ಲಿರುವ ನಾಣ್ಯ ಹಾಕಿ ಕಲಶ ಭರ್ತಿ ಮಾಡಿ, ಯಥಾಶಕ್ತಿ ಚಿನ್ನದ ಕಾಲುಂಗರ, ಬೆಳ್ಳಿಯ ಒಂದು ದೀಪದ ಜೊತೆಯಲ್ಲಿ ಚಿನ್ನದ ಕಾಲುಂಗರ ಇರಿಸಿ, ದೇವಿಗೆ ಸಮರ್ಪಿಸಲಾಗುತ್ತೆ. ಈ ವೇಳೆ ಭಕ್ತರು ಅನೇಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.