
UDUPI: ಉಡುಪಿಯಲ್ಲಿ ರಾಜ್ಯೋತ್ಸವ ಸಂಭ್ರಮ...!!!
Tuesday, November 1, 2022
ಉಡುಪಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್ ಖಾರ್ವಿ ರವರು 77ನೇ ಬಾರಿಗೆ ರಕ್ತದಾನ ಮಾಡುವ ಮುಖಾಂತರ ರಾಜ್ಯೋತ್ಸವದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಸಚಿವ ಅಂಗಾರ ಇವರು ಅಭಿನಂದಿಸಿದರು. ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ, ಮೀನುಗಾರಿಕಾ ಜಂಟಿ ನಿರ್ದೇಶಕ ಗಣೇಶ್ ಕೆ, ಮೀನುಗಾರಿಕೆ ಉಪ ನಿರ್ದೇಶಕ ಶಿವಕುಮಾರ್ ಜಿಎಂ, ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಸೆರೆಗಾರ್, ನೌಕರರ ಸಂಘದ ಉದಯ ಕುಮಾರ್ ಶೆಟ್ಟಿ, ಪ್ರಶಾಂತ ಶೆಟ್ಟಿ, ಇಲಾಖೆಯ ಸಿಬ್ಬಂದಿ ರವಿ ಎಚ್, ನಿತ್ಯಾನಂದ, ಅಮಿತಾ ಮ್ಯೊಲಿ ಮತ್ತು ಅಲೆವೂರಿನ ಪಿ.ಡಿ.ಓ ದಯಾನಂದ ಅವರು ಉಪಸ್ಥಿತರಿದ್ದರು.