-->
PUTTUR: ಪುತ್ತೂರಿನಲ್ಲಿ ಪಟಾಕಿ ಗೋಡೌನ್ ಭಸ್ಮ...!!!

PUTTUR: ಪುತ್ತೂರಿನಲ್ಲಿ ಪಟಾಕಿ ಗೋಡೌನ್ ಭಸ್ಮ...!!!



ಪುತ್ತೂರು: ಪುತ್ತೂರಿನ ಪಟಾಕಿ ಗೊಡೌನ್ ಗೆ ಬೆಂಕಿ  ಆಕಸ್ಮಿಕ ಸಂಭವಿಸಿ ಲಕ್ಷಾಂತರ ರೂಪಾಯಿ ಪಟಾಕಿ ನಾಶವಾದ ಘಟನೆ ಇಂದು ರಾತ್ರಿ ನಡೆದಿದೆ.  ಪುತ್ತೂರು ದರ್ಬೆಯ ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ಆರಾಧ್ಯ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿದ್ದ ಪಟಾಕಿ ಗೊಡೌನ್ ನಲ್ಲಿ ಶೇಖರಿಸಿಟ್ಟ ಪಟಾಕಿ  ಸಂಜೆ7ರ ವೇಳೆಗೆ  ಸಿಡಿಯಲು ಪ್ರಾರಂಭವಾಗಿದೆ.  



ಪಟಾಕಿ ಸಿಡಿಯುವ ಶಬ್ದಕ್ಕೆ ದರ್ಬೆ ಸುತ್ತಮುತ್ತಲಿನ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಆ ಕಟ್ಟಡದಲ್ಲಿರುವ ಎಲ್ಲಾ ಅಂಗಡಿಯವರು ಬಂದ್ ಮಾಡಿ ಹೊರ ಬಂದಿದ್ದಾರೆ.  ದರ್ಬೆಯಲ್ಲಿ ಪಟಾಕಿ ಮಾಡುವವರಿಗೆ  ಸೇರಿದ ಪಟಾಕಿ ಎನ್ನಲಾಗಿದೆ. 



ಮುಚ್ಚಲ್ಪಟ್ಟಿದ್ದ ಅಂಗಡಿಯಂತಿರುವ  ಕಾಂಪ್ಲೆಕ್ಸ್ ನ ಕಾರು ಪಾರ್ಕಿಂಗ್ ನಲ್ಲಿ ಇಷ್ಟು ಪ್ರಮಾಣದ ಪಟಾಕಿ ಶೇಖರಿಸಿ ಇಡಲು ಪರವಾನಿಗೆ ನೀಡುತ್ತಾರೆಯೇ ಎನ್ನುವ ಪ್ರಶ್ನೆಯನ್ನು ನೆರೆದಿದ್ದವರು ಕೇಳುತಿದ್ದರು. ಪುತ್ತೂರು ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

Ads on article

Advertise in articles 1

advertising articles 2

Advertise under the article