ಸುರತ್ಕಲ್: ಶಿಕ್ಷಕ ರಕ್ಷಕರ ಸಭೆಯಲ್ಲಿ ಟೀಚರ್ ಮೇಲೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ!
Sunday, November 6, 2022
ಮಂಗಳೂರು: ಶಿಕ್ಷಕ ರಕ್ಷಕ ಸಭೆಯಲ್ಲಿ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ ಘಟನೆ ಕಾಟಿಪಳ್ಳ ಎರಡನೇ ಬ್ಲಾಕ್ ನ ನೂರುಲ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.
ಕಾಟಿಪಳ್ಳ ನಾರಾಯಣಗುರು ಶಾಲೆಯ ಬಳಿ ನಿವಾಸಿ ಚಂದ್ರಕಲಾ ಹಲ್ಲೆಗೊಳಗಾದ ಶಿಕ್ಷಕಿ. ಘಟನೆಯಿಂದ ಗಾಯಗೊಂಡ ಶಿಕ್ಷಕಿ ಸದ್ಯ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಹನೀಫ್ ನನ್ನು ಸುರತ್ಕಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಎಬ್ಬಿಸಿ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದಾಗಿ ಸಭೆಯಲ್ಲಿ ಹಾಜರಿದ್ದವರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.