ಲೈಂಗಿಕ ದೌರ್ಜನ್ಯ ಕೇಸ್; ಶ್ರೀಲಂಕಾ ಆಟಗಾರ ಆಸ್ಟ್ರೇಲಿಯಾದಲ್ಲಿ ಅರೆಸ್ಟ್!
Sunday, November 6, 2022
ಸಿಡ್ನಿ : ಅತ್ಯಾ*ರ ಆರೋಪದ ಮೇಲೆ ಶ್ರೀಲಂಕಾ ಬ್ಯಾಟ್ಸ್ ಮೆನ್ ಧನುಷ್ಕ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿರುವ ಘಟನೆ ನಡೆದಿದೆ.
ಮಹಿಳೆಯೋರ್ವಳ ದೂರಿನನ್ವಯ ಗುಣತಿಲಕ ಬಂಧಿಸಿದ್ದಾರೆ ಆಸ್ಟ್ರೇಲಿಯಾದ ಪೊಲೀಸರು ತಿಳಿಸಿದ್ದಾರೆ. ರೋಸ್‌ಬೇಯಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಗುಣತಿಲಕ ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯೊಬ್ಬರ ಸಂಪರ್ಕ ಮಾಡಿದ್ದರು. ಬಳಿಕ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ತಂಡ ತವರಿಗೆ ಮರಳಿದರೂ, ಅತ್ಯಾ*ರ ಆರೋಪ ಹೊಂದಿರುವ ಗುಣತಿಲಕ ಆಸ್ಟ್ರೇಲಿಯಾ ಪೊಲೀಸರ ಬಂಧನದಲ್ಲಿದ್ದಾರೆ.