ಪ್ರತಿಭಾ ಕುಳಾಯಿ ವಿರುದ್ಧ ಕಾಮೆಂಟ್: ಶ್ಯಾಮ ಸುದರ್ಶನ್ ಭಟ್ ಗೆ ನಿರೀಕ್ಷಣಾ ಜಾಮೀನು!
ಮಂಗಳೂರು: ಸಾಮಾಜಿಕ ಕಾರ್ಯಕರ್ತೆ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ಧ ಕೆಟ್ಟ ಭಾಷೆಯಲ್ಲಿ ಕಾಮೆಂಟ್ ಮಾಡಿದ್ದ ಆರೋಪಿ ಕಹಳೆ ಸುದ್ದಿ ಸಂಸ್ಥೆಯ ಮುಖ್ಯಸ್ಥ ಶ್ಯಾಮ ಸುದರ್ಶನ್ ಭಟ್ ಗೆ ನಿರೀಕ್ಷಣಾ ಜಾಮೀನು ದೊರೆತಿದೆ.
ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಸುದರ್ಶನ್ ನಿಗೆ ಸೆಷನ್ ಕೋರ್ಟ್ ನವೆಂಬರ್ 9 ರ ವರೆಗೆ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಭಾವಿಗಳ ಒತ್ತಡ, ಪೊಲೀಸ್ ವೈಫಲ್ಯ!?
ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಕಾಮೆಂಟ್ ಮಾಡಿದ್ದ ಆರೋಪಿ ಸುದರ್ಶನ್ ಭಟ್, ಬಳಿಕ ತಾನು ಮಾಡಿದ್ದ ಅಶ್ಲೀಲ ಕಾಮೆಂಟ್ ಅನ್ನು ಸಮರ್ಥಿಸಿಕೊಂಡಿದ್ದ. ಈತನ ಮೇಲೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ದಾಖಲಾಗಿ ಹದಿನೈದು ದಿನಗಳ ಕಾಲ ಆತ ತಲೆಮರೆಸಿಕೊಂಡಿದ್ದರೂ, ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ಪೊಲೀಸ್ ಕಾರ್ಯ ವೈಖರಿ ಬಗ್ಗೆ ದೂರುದಾರೆ ಪ್ರತಿಭಾ ಕುಳಾಯಿ ಈ ಹಿಂದೆಯೇ ಪತ್ರಿಕಾಗೋಷ್ಟಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಭಾವಿಗಳ ಒತ್ತಡವೇ ಈತನ ರಕ್ಷಣೆಗೆ ಕಾರಣವಾಗಿದೆ ಎಂದು ಹಲವರು ದೂರಿದ್ದಾರೆ.
ಕೆ.ಆರ್.ಶೆಟ್ಟಿ ಜೈಲಿನಲ್ಲಿ!
ಪ್ರಕರಣದ ಇನ್ನೋರ್ವ ಆರೋಪಿ ಹಿಂದೂ ಕಾರ್ಯಕರ್ತ ಕೆ.ಆರ್. ಶೆಟ್ಟಿಗೆ ಮಾತ್ರ ಇನ್ನೂ ನ್ಯಾಯಾಂಗ ಬಂಧನ ಮುಂದುವರೆದಿದೆ.