ಪುತ್ತೂರು| ಬಂಧಿತ SDPI ಮುಖಂಡರ ವೈದ್ಯಕೀಯ ಪರೀಕ್ಷೆ; ಬೆಂಗಳೂರಿಗೆ ಶಿಫ್ಟ್
Saturday, November 5, 2022
ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಬಂಧಿಸಲ್ಪಟ್ಟ SDPI ಮುಖಂಡರನ್ನು ಪುತ್ತೂರಿನ ತಾಲೂಕು ಸರಕಾರಿ ಆಸ್ಪತ್ರೆಗೆ NIA ತಂಡ ಕರೆ ತಂದಿತು.
ಬಂಧಿತರಾದ SDPI ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಹಾಗೂ ಸುಳ್ಯದ ಇಬ್ರಾಹಿಂ ಶಾ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೆಲ ಗಂಟೆಗಳ ನಂತರ ಬಂಧಿತರನ್ನು ಬೆಂಗಳೂರಿಗೆ NIA ತಂಡ ಕರೆದೊಯ್ದಿರುವುದಾಗಿ ಮೂಲಗಳು ತಿಳಿಸಿವೆ. ಇವರಿಬ್ಬರನ್ನು ಇಂದು ಮುಂಜಾವ ನಡೆದ ದಾಳಿ ವೇಳೆ NIA ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆಯನ್ನು ಬೆಂಗಳೂರಿನಲ್ಲಿಯೇ ಅರೆಸ್ಟ್ ಮಾಡಿದ್ದಾಗಿ NIA ಮೂಲಗಳು ತಿಳಿಸಿವೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಿಗಿ ಭದ್ರತೆಯಲ್ಲಿ NIA ಅಧಿಕಾರಿಗಳು ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿ ಬಳಿಕ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದರು.