ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ | ಶಾಫಿ, ಇಕ್ಬಾಲ್ ಬೆಳ್ಳಾರೆ ಅರೆಸ್ಟ್!
Saturday, November 5, 2022
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಸಂಬಂಧ SDPI ಮುಖಂಡರಾದ ಇಕ್ಬಾಲ್ ಬೆಳ್ಳಾರೆ ಹಾಗೂ ಶಾಫಿ ಬೆಳ್ಳಾರೆಯನ್ನು NIA ತನಿಖಾ ತಂಡ ಬಂಧಿಸಿದ್ದಾಗಿ ತಿಳಿದು ಬಂದಿದೆ.
ಇವರ ಜೊತೆಗೆ ನಿಷೇಧಿತ PFI ಸಂಘಟನೆ ಸದಸ್ಯ ಸುಳ್ಯದ ಇಬ್ರಾಹಿಂ ಶಾ ನನ್ನೂ ಬಂಧಿಸಲಾಗಿದೆ.
ಇಂದು ಮುಂಜಾವ ದಾಳಿ ನಡೆಸಿದ NIA ಈ ಮೂವರನ್ನು ಹತ್ಯೆ ಪ್ರಕರಣ ಸಂಬಂಧ ಬಂಧಿಸಿ, ತನಿಖೆ ಮುಂದುವರೆಸಿದೆ.
ಶಾಫಿ ಬೆಳ್ಳಾರೆ SDPI ರಾಜ್ಯ ಕಾರ್ಯದರ್ಶಿ ಆಗಿದ್ದರೆ, ಇಕ್ಬಾಲ್ ಬೆಳ್ಳಾರೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯನಾಗಿದ್ದಾರೆ.