
ಮಂಗಳೂರು: ಪೋಷಕರ ಕೈ ತಪ್ಪಿದ್ದ ಮಗುವನ್ನು ವಾಪಸ್ ಮಡಿಲಿಗೆ ಸೇರಿಸಿದ CISF
ಮಂಗಳೂರು: ವಿದೇಶಕ್ಕೆ ಹೋಗುವವರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಬಂದಿದ್ದ ಕುಟುಂಬವೊಂದರಿಂದ ಮಗು ಕಣ್ತಪ್ಪಿ ಹೋಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ CSIF ಸಿಬ್ಬಂದಿಗಳು ಮಗುವನ್ನು ಪೋಷಕರ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾದ ಘಟನೆಯೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
![]() |
CISF ಸಿಬ್ಬಂದಿಗಳಾದ ಮಂಜುನಾಥ್ ಮತ್ತು ಜೋಸೆಫ್ ರತನ್. |
ಕಾಸರಗೋಡು ಮೂಲದ 6 ರ ಹರೆಯದ ಮೊಹಮ್ಮದ್ ಇಶಾಮ್ ಪೋಷಕರ ಜೊತೆಗೂಡಿ ಏರ್ ಪೋರ್ಟ್ ಗೆ ಆಗಮಿಸಿದ್ದ. ಈ ಸಮಯ ಇಶಾಮ್ ಪೋಷಕರ ಕಣ್ತಪ್ಪಿಸಿ ಹೋಗಿದ್ದಾನೆ ಎನ್ನಲಾಗಿದೆ. ಇದರಿಂದ ವಿಚಲಿತರಾದ ಪೋಷಕರು ಏರ್ ಪೋರ್ಟ್ ನಲ್ಲಿರುವ CISF ಸಿಬ್ಬಂದಿಗಳ ಮೊರೆ ಹೋಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ CISF ಸಿಬ್ಬಂದಿಗಳಾದ ಮಂಜುನಾಥ ಸಾಲ್ಗಾಂವ್ಕರ್ ಹಾಗೂ ಜೋಸೆಫ್ ರತನ್ ರೇಗೋ ಜೊತೆಗೂಡಿ ಟರ್ಮಿನಲ್ ಹೊರಭಾಗದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೋಷಕರ ಮಡಿಲಿಗೆ ಮಗುವನ್ನು ಸುರಕ್ಷಿತವಾಗಿ ತಲುಪಿಸಿದ್ದು, ಪೋಷಕರು ನಿಟ್ಟುಸಿರು ಬಿಡುವಂತಾಯಿತು.
ಪತ್ರದ ಮೂಲಕ CISF ಕಾರ್ಯಕ್ಷಮತೆಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.