FILM: ಕಾಂತಾರವನ್ನ ಮೆಚ್ಚಿದ ಮಿಸ್ಟರ್ 360 ಎಬಿಡಿ
Friday, November 4, 2022
ಕಾಂತಾರ ಚಿತ್ರವನ್ನ ಇಡೀ ದೇಶ ಮೆಚ್ಚಿಕೊಂಡಿದೆ. ಈಗಲೂ ಸಹ ಅನೇಕ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಾ ಇದೆ. ಹೀಗಿರುವಾಗ ಮಿಸ್ಟರ್ 360 ಸೌತ್ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ಕೂಡ ಕಾಂತಾರವನ್ನ ಮೆಚ್ಚಿಕೊಂಡಿದ್ದಾರೆ.
ಹೌದು ಎಬಿಡಿ ಬಾಯಲ್ಲೂ ಈ ಕಾಂತಾರ ಚಿತ್ರದ ಹೆಸರು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಜೊತೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಎಬಿಡಿ ವಿಲಿಯರ್ಸ್ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳ ಹುಬ್ಬೇರಿಸಿದ್ದಾರೆ. ಇದರ ಜೊತೆಗೆ ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್ ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ಎಂದು ಹೊಂಬಾಳೆ ಫಿಲಂ ಟ್ವೀಟ್ ಮಾಡಿದೆ.