
BELTHANGADY: ಸಾವನ್ನು ರಾಜಕೀಯವಾಗಿ ಬಳಸಿ ಸಂಭ್ರಮಿಸುತ್ತಿರುವ ಕಲ್ಮಂಜದ ವ್ಯಕ್ತಿ
ಬೆಳ್ತಂಗಡಿ: ಮನೆಯಿಂದ ತೋಟಕ್ಕೆ ಹೋಗಿದ್ದ ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ ಅವರ ಸಾವು ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಸರಕಾರಿ ಜಾಗದ ತಕರಾರು ಪ್ರಕರಣದ ವಿಚಾರದಲ್ಲಿ ದ್ವೇಷ ತಿರಿಸಿ ಲಾಭ ಪಡೆಯಲು ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಪಕ್ಷದವರ ಜೊತೆ ಪ್ರತಿಭಟನೆ ಮಾಡಿಸಿ ಕಾಂಗ್ರೆಸ್ - ಬಿಜೆಪಿ ಎಂಬಂತೆ ಪ್ರಕರಣವನ್ನು ಬಿಂಬಿಸಿ ಪೊಲೀಸರ ತನಿಖೆಯ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಸ್ವಯಂ ಘೋಷಿತನೊಬ್ಬ ಮಾಡುತ್ತಿದ್ದು, ಪ್ರಕರಣ ರಾಜಕೀಯ ಬಣ್ಣಕ್ಕೆ ತಿರುಗಲು ಪ್ರಮುಖ ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಅದಲ್ಲದೆ ಸಾವಿನಲ್ಲಿಯೂ ತನ್ನ ವಯಕ್ತಿಕ ದ್ವೇಷವನ್ನು ತಿರಿಸುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ.
ಮೃತಪಟ್ಟ ಉದಯ ಗೌಡರ ದೂರದ ಸಂಬಂಧಿ ಕಾಂಗ್ರೆಸ್ ಪಕ್ಷದಲ್ಲಿ ಸ್ವಯಂ ಘೋಷಿತನಂತೆ ಮುಖವಾಡ ಹಾಕಿಕೊಂಡು ಪಕ್ಷದಲ್ಲಿ ಹುದ್ದೆಯನ್ನು ಪಡೆದುಕೊಂಡಿರುವ ಕಲ್ಮಂಜ ಗ್ರಾಮದ ಮೋಹನ್ ಗೌಡ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ಪಕ್ಷದವರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಕಲ್ಮಂಜ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯನಾಗಿರುವ ಪ್ರವೀಣ್ ಗೌಡನ ತಮ್ಮ ಪ್ರಶಾಂತ್ ಗೌಡ ನ ಮೇಲೆ ಉದಯ ಗೌಡ ಸಾವಿನ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ಇದಕ್ಕಾಗಿಯೇ ರಾಜಕೀಯವಾಗಿ ಬಳಸಿ ಸಂಬಂಧಿಕನನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸುಳ್ಳು ಮಾಹಿತಿ ನೀಡಿ ಬುಧವಾರ ಸಂಜೆ ಧರ್ಮಸ್ಥಳ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆ ಮಾಡಿಸಿ ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾನೆ. ಇನ್ನೂ ಈ ಪ್ರಕರಣದ ತನಿಖೆಯ ದಾರಿ ತಪ್ಪಿಸಲು ಪ್ರಮುಖ ಪಾತ್ರ ಮೋಹನ್ ಗೌಡ ವಹಿಸುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಮೋಹನ್ ಗೌಡ ಕಲ್ಮಂಜಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ(43) ಅವರು ಆಕ್ಟೋಬರ್ 29 ರಂದು ತೋಟಕ್ಕೆ ಹೋಗುವ ದಾರಿ ಮಧ್ಯೆ ಶಿವಪ್ಪ ಗೌಡ ಎಂಬವರ ಪಾಳುಬಿದ್ದ ಗದ್ದೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸಹೋದರ ಯೋಗೀಶ ಕೆ ಅವರು ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನಂತೆ ಹರೀಶ್ ಗೌಡ(59) ಪ್ರಶಾಂತ್(30) , ಸುಮಂತ್(21) ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕಲಂ: 304 (A), 139 ಎಲೆಕ್ಟ್ರಿಸಿಟಿ ಆ್ಯಕ್ಟ್ 2003 ,ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿದ್ದು ಗುರವಾರ ಸಂಜೆ ಮೂವರನ್ನು ಬಂಧಿಸಲಾಗಿದೆ.
ಘಟನೆ ವಿವರ: ಮೃತ ಉದಯ ಗೌಡ ಅವರ ಸಹೋದರ ಯೋಗೀಶ ಅವರು ನೀಡಿದ ದೂರಿನ ಸಾರಾಂಶದಲ್ಲಿ, ಅ.29 ರಂದು ರಾತ್ರಿ ತಾನು 9.30 ಕ್ಕೆ ರಬ್ಬರ್ ಟ್ಯಾಪಿಂಗ್ ಬಗ್ಗೆ ಮನೆಯಿಂದ ಹೊರ ಹೋದವನು 2 ಗಂಟೆಗೆ ಮರಳಿ ಬಂದಿದ್ದೆ. ಬೆಳಿಗ್ಗೆ 7 ಗಂಟೆಗೆ ಮತ್ತೆ ರಬ್ಬರ್ ಹಾಲು ಸಂಗ್ರಹಕ್ಕೆಂದು ಮನೆಯಿಂದ ತೆರಳುವ ವೇಳೆ ಅಣ್ಣ ಉದಯ ಗೌಡ ಮನೆಯಲ್ಲಿರಲಿಲ್ಲ. ಅವರು ಎಂದಿನಂತೆ ತೋಟದ ಕಡೆಗೆ ಹೋಗಿರಬಹುದು ಎಂದುಕೊಂಡಿದ್ದೆವು. ತೋಟದಲ್ಲಿದ್ದ ವೇಳೆ ನನಗೆ ನನ್ನ ಪತ್ನಿ ಕರೆಮಾಡಿ, ಅಣ್ಣ ಉದಯ ಗೌಡ ಇನ್ನೂ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಆದ್ದರಿಂದ ನಾನು ಮಧ್ಯಾಹ್ನ 12 ಗಂಟೆಗೆ ಮನೆಗೆ ವಾಪಾಸು ಬಂದು ಅಕ್ಕ ಪಕ್ಕದ ಸಂಬಂಧಿಗಳ ಮನೆಗೆ ಕರೆ ಮಾಡಿ ವಿಚಾರ ತಿಳಿಸಿದ್ದೆ. ಇದಾಗಿ ಹುಡುಕುವ ಯತ್ನದಲ್ಲಿರುವಂತೆ ಸಂಬಂಧಿ ಅಶೋಕ ಎಂಬವರು ಕರೆ ಮಾಡಿ, ಉದಯ ಗೌಡ ಅವರ ದೇಹ ಶಿವಪ್ಪ ಗೌಡ ಅವರ ಪಾಳುಬಿದ್ದ ಗದ್ದೆಯಲ್ಲಿ ಕವುಚಿ ಮಲಗಿದ ಸ್ಥಿತಿಯಲ್ಲಿರುವುದಾಗಿ ಮಾಹಿತಿ ನೀಡಿದರು. ನಾವೆಲ್ಲ ಅಲ್ಲಿಗೆ ಓಡಿಹೋಗಿ ನೋಡಿ ಉಪಚರಿಸಲಾಗಿ ಎರಡೂ ಕಾಲುಗಳಲ್ಲಿ ವಿದ್ಯುತ್ ಅವಘಡದಂತಹಾ ಕುರುಹು ಕಂಡು ಬಂದಿತ್ತು. ಇದು ವಿದ್ಯುತ್ ವಯರ್ ತಾಗಿಯೇ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೋಹನ್ ಗೌಡ ಕಲ್ಮಂಜ ಮನೆಯ ಹತ್ತಿರ ಸುಮಾರು ಎರಡು ಎಕ್ರೆ ಸರಕಾರಿ ಜಾಗವನ್ನು ಬೇಲಿ ಹಾಕಿ ಕಬಳಿಸಲು ಯತ್ನಿಸಿದಾಗ ಇದರ ಬಗ್ಗೆ ಇಲಾಖೆಗೆ ದೂರು ನೀಡಿ ಸರಕಾರದ ವಶಕ್ಕೆ ಒಪ್ಪಿಸಿದ್ದ ಪ್ರವೀಣ್ ಗೌಡ ನಂತರ ಇಬ್ಬರ ಗಲಾಟೆ ವಿಚಾರ ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ಕೂಡ ದಾಖಲಾಗಿತ್ತು. ಮೋಹನ್ ಗೌಡ ಮತ್ತೆ ಮನೆಯವರ ಮೇಲೆ ಅಕ್ರಮ ಮಧ್ಯ ಮಾರಾಟ ಬಗ್ಗೆ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಕೇಸ್ ಇದೆ.ಮೋಹನ್ ಗೌಡ ಕಲ್ಮಂಜ ನಿವಾಸಿಯಾಗಿದ್ದರೂ ಕಳೆದ ಮೂರು ವರ್ಷಗಳಿಂದ ಬಂಟ್ವಾಳದ ಪ್ಲ್ಯಾಟ್ ನಲ್ಲಿ ವಾಸವಾಗಿದ್ದಾನೆ. ಜಾಗದ ಗಲಾಟೆ ವೇಳೆ ಪ್ರವೀಣ್ ಗೆ ನಿನ್ನನ್ನು ರಾಜಕೀಯವಾಗಿ ಮುಂದಿನ ದಿನಗಳಲ್ಲಿ ಮುಗಿಸುತ್ತೇನೆಂದು ಮೋಹನ್ ಗೌಡ ಕಲ್ಮಂಜ ಚಾಲೆಂಜ್ ಕೂಡ ಮಾಡಿದ್ದ ಎನ್ನಲಾಗಿದೆ. ಬುಧವಾರ ಪ್ರತಿಭಟನೆ ವೇಳೆ ಮಾಜಿ ಶಾಸಕರು ಮೂರು ಭಾರಿ ಅಧಿಕಪ್ರಸಂಗ ಮಾಡಿದ್ದಕ್ಕೆ ಬೈದು ಹಿಂದೆ ಕಳುಹಿಸಿದ್ದಾರೆ. ಈತನ ಸರಕಾರಿ ಜಾಗದ ತಕಾರಾರಿನಲ್ಲಿ ಮಾಡಿದ ರಾಜಕೀಯ ನಾಟಕ ಮೃತಪಟ್ಟ ಉದಯ ಗೌಡರ ಮನೆಯವರ ಜೊತೆ ಸುಮಾರು ಮೂವತ್ತು ಕುಟುಂಬ ಬೇರ್ಪಡುವಂತಾಗಿದೆ. ಸರಕಾರಿ ಜಾಗದ ತಕರಾರು ದ್ವೇಷವನ್ನು ರಾಜಕೀಯವಾಗಿ ಬಳಸಿಕೊಂಡು ಲಾಭಪಡೆಯುವ ಮೋಹನ್ ಗೌಡ ಮೇಲೆ ಧರ್ಮಸ್ಥಳ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಲ್ಮಂಜ ಗ್ರಾಮಸ್ಥರ ಅಗ್ರಹವಾಗಿದೆ.