ಮಂಗಳೂರು| ಕ್ಷುಲ್ಲಕ ವಿಚಾರಕ್ಕೆ ಬಾಲಕನ ಮೇಲೆ ಹಲ್ಲೆ; ವೀಡಿಯೋ ವೈರಲ್
ಮಂಗಳೂರು: ಮಕ್ಕಳ ನಡುವೆ ನಡೆಯುತ್ತಿದ್ದ ಕ್ಷುಲ್ಲಕ ವಿಚಾರವನ್ನೇ ದೊಡ್ಡದನ್ನಾಗಿಸಿ ಬಾಲಕನಿದ್ದ ಬಸ್ ಸ್ಟ್ಯಾಂಡ್ ಗೆ ಆಗಮಿಸಿದ ಯುವಕನೋರ್ವ ಅನೈತಿಕ ಪೊಲೀಸ್ ಗಿರಿ ಮೆರೆದ ಘಟನೆ ನಗರದ ಹೊರವಲಯದ ಅಡ್ಯಾರ್ ಕಟ್ಟೆಯಲ್ಲಿ ನಡೆದಿದೆ.
ಘಟನೆ ಸಂಬಂಧಿತ ವೀಡಿಯೋ ವೈರಲ್ ಆಗಿದ್ದು, ಬಾಲಕನ ಕೆನ್ನೆ ಮೇಲೆ ಬಲವಾದ ಹೊಡೆತ ಬಿದ್ದಿದ್ದು ಸೆರೆಯಾಗಿದೆ. ಆ ದೃಶ್ಯದಲ್ಲಿ ಹಲ್ಲೆ ನಡೆಸಿದವರು ಯಾರು ಎಂದು ಸ್ಪಷ್ಟವಾಗಿಲ್ಲ. ಆದರೆ, ಹಲ್ಲೆಯಿಂದ ಬಾಲಕನ ಕೆನ್ನೆ ಮೇಲೆ ಗಂಭೀರ ಗಾಯವಾಗಿದೆ.
ಅಲ್ಲದೇ, ವೀಡಿಯೋದಲ್ಲಿ ಬಾಲಕ ನೋವಿನಿಂದ ಬಿಕ್ಕಿ ಬಿಕ್ಕಿ ಅಳುವ ದೃಶ್ಯವೂ ಸೆರೆಯಾಗಿದೆ. ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಶಾಲೆ ಬಿಟ್ಟು ತೆರಳುವ ವೇಳೆ ಈ ಘಟನೆ ನಡೆದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೀಡಿಯೋದಲ್ಲಿ ಮಹಿಳೆಯೋರ್ವರು, ತನ್ನ ಮಗನಿಗೂ ಬಾಲಕ ಪ್ರತಿದಿನ ಹಲ್ಲೆ ನಡೆಸುತ್ತಿದ್ದ ಎನ್ನುವುದಾಗಿ ಆಡಿರುವ ಮಾತುಗಳಿವೆ.
ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅನೈತಿಕ ಪೊಲೀಸ್ ಗಿರಿ ಮೆರೆದ ಯುವಕನ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ.