-->
ಬೀಫ್ ಸ್ಟಾಲ್ ವಿರುದ್ಧ ವೇದವ್ಯಾಸ ಕಾಮತ್ ಅವರದ್ದು ಮೊಸಳೆ ಕಣ್ಣೀರು: ಕೆ. ಅಶ್ರಫ್

ಬೀಫ್ ಸ್ಟಾಲ್ ವಿರುದ್ಧ ವೇದವ್ಯಾಸ ಕಾಮತ್ ಅವರದ್ದು ಮೊಸಳೆ ಕಣ್ಣೀರು: ಕೆ. ಅಶ್ರಫ್



ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಸಭೆಯು ಪ್ರತೀ ತಿಂಗಳು ಸಂಸದ, ಶಾಸಕರ ಹಾಗೂ ಕಾರ್ಪೊರೇಟರ್ ಗಳ ಹಾಜರಾತಿಯಲ್ಲಿ ನಡೆಯುತ್ತಿದೆ. ಸಂಕೀರ್ಣದ ವಿನ್ಯಾಸದಲ್ಲಿ ಅಗತ್ಯ ಸ್ಟಾಲ್ ಗಳ ವಿಷಯ ಅದೆಷ್ಟೋ ಬಾರಿ ಪ್ರಸ್ತಾಪ ಆಗಿ ಸ್ಟಾಲ್ ಗಳ ನಿರ್ಮಾಣ ರಚನೆ ಆಗುತ್ತಿದೆ. ಪ್ರಸ್ತುತ ಶಾಸಕರು ಮೊಸಳೆ ಕಣ್ಣೀರು ಸುರಿಸುತ್ತಿದ್ದು ಮಂಗಳೂರಿನ ಪ್ರಜೆಗಳನ್ನು ಮೂರ್ಖರನ್ನಾಗಿಸುವ ಪ್ರಯತ್ನದಲ್ಲಿದ್ದಾರೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ದೂರಿದ್ದಾರೆ.

ನೂತನವಾಗಿ ನಿರ್ಮಾಣವಾಗಲಿರುವ ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ 9 ಬೀಫ್ ಸ್ಟಾಲ್ ಗಳಿಗೆ ಅವಕಾಶ‌ ನೀಡಲಾಗಿದ್ದರ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ನೀಡಿರುವ ಹೇಳಿಕೆಗೆ ಅಶ್ರಫ್ ಪ್ರತಿಕ್ರಿಯಿಸಿದ್ದಾರೆ‌‌.

ಬೀಫ್ ಸ್ಟಾಲ್ ವಿವಾದ ಎಂಬುದು ಮುಂಬರುವ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತಯಾರು ಮಾಡಿದ ತುರ್ತು ಅಜೆಂಡಾ ಎಂದು ಅಶ್ರಫ್ ಟೀಕಿಸಿದ್ದಾರೆ.

ಶಾಸಕರು ಮತ್ತು ಬಿಜೆಪಿ ಆಡಳಿತದ ಮಹಾನಗರ ಪಾಲಿಕೆ ಬೀಫ್ ಸ್ಟಾಲ್ ಕಾರಣಕ್ಕಾಗಿ ಭೂಮಿ ಪೂಜೆ ನಡೆಸುವುದಿಲ್ಲ ಎಂಬ ತನ್ನ ಹೇಳಿಕೆಗೆ ಬದಲಾಗಿ, ತಾಕತ್ತು ಇದ್ದರೆ ಭಾರತದಿಂದ ವಿದೇಶಕ್ಕೆ ರಫ್ತು ಗೊಳ್ಳುತ್ತಿರುವ ಗುಜರಾತ್ ಮತ್ತು ಉತ್ತರ ಭಾರತದಾದ್ಯಂತ ಅಸ್ತಿತ್ವದಲ್ಲಿರುವ ಜೈನ ಮತ್ತು ವೈದಿಕ ಒಡೆತನದ, ಬಿಜೆಪಿ ರಾಜ್ಯ ಸಭಾ ಸದಸ್ಯರಾದ ರಾಜೀವ್ ಚಂದ್ರ ಶೇಖರ್ ಒಡೆತನದ ಬೀಫ್ ರಫ್ತು ಪ್ಲಾಂಟ್ ನಿಂದ ಹೊರಡುವ ಶೀತಲೀಕೃತ ರಫ್ತು ಹಡಗುಗಳನ್ನು ತಡೆಯುವ ವಿಘ್ನ ನಿವಾರಕ ಪೂಜೆ ನಡೆಸಲಿ. ಇಂದು ಬೀಫ್ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಸರ್ಕಾರ ತಾಕತ್ತು ಇದ್ದರೆ ಬೀಫ್ ರಫ್ತು ನಿಲ್ಲಿಸಲು ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.

ಸೆಂಟ್ರಲ್ ಮಾರ್ಕೆಟ್ ನಲ್ಲಿ ಭವಿಷ್ಯದಲ್ಲಿ ಮಾರಾಟವಾಗುವ ಬೀಫ್ ಮುಸಲ್ಮಾನರು ಮಾರಾಟ ಮಾಡುವ ಬೀಫ್ ಅಲ್ಲ, ಬದಲಾಗಿ ಅದಾನಿ, ಅಂಬಾನಿ, ರಾಜೀವ್ ಚಂದ್ರ ಶೇಖರ್ ಒಡೆತನದ ಪ್ಯಾಕೇಜ್ಡ್ ಬಫೆಲ್ಲೋ ಮೀಟ್ ಎಂಬ ಸಂಸ್ಕರಿತ ಬೀಫ್ ಎಂಬುದು ಜನರು ಅರ್ಥ ಮಾಡಿಕೊಳ್ಳಲಿ. ಸಂಘ ಪರಿವಾರದ ಇಂತಹ ಪ್ರಹಸನ ಜನರಿಗೆ ಅರ್ಥವಾಗಲಿದೆ ಎಂದು ಟೀಕಿಸಿದ್ದಾರೆ.


Ads on article

Advertise in articles 1

advertising articles 2

Advertise under the article